ಮಂಗಳವಾರ, ಜನವರಿ 21, 2020
19 °C

ಜಿಲ್ಲೆಯ ವಿವಿಧೆಡೆ ಗಣರಾಜೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಾಲಾ -ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳು, ವಿವಿಧ ಸಂಘ ಸಂಸ್ಥೆ ಮತ್ತು ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಗುರುವಾರ 63ನೇ ಗಣರಾಜೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಚೇರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ ಧ್ವಹಾರೋಹಣ ನೆರವೇರಿಸಿದರು.

ಕೆಪಿಸಿಸಿ ಸದಸ್ಯ ಜಿ.ಎನ್. ಪಾಟೀಲ ಮಾತನಾಡಿ, ಪ್ರಜಾ ಪ್ರಭುತ್ವದಡಿ ನೆಮ್ಮದಿಯಾಗಿ ಜೀವಿಸಲು ಹಾಗೂ ನಾವೆಲ್ಲಾ ಒಂದೇ ದೇಶದ ನಾಗರೀಕರೆಂದು ಕರೆಸಿಕೊಳ್ಳಲು ಇಂದು ಸ್ವಾಭಿ ಮಾನದ ದಿನವನ್ನಾಗಿ ಗಣರಾಜ್ಯೋತ್ಸವವನ್ನು ಆಚರಸಲಾ ಗುತ್ತಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ಜೆ.ಟಿ. ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಜೋಗಿನ, ಮುತ್ತಣ್ಣ ಬೆಣ್ಣೂರ, ಬಿ.ಡಿ. ಮೊಕಾಶಿ, ಮೈನುದ್ದಿನ್ ನಬಿವಾಲೆ, ಮಾದವಿ ರಾಠೋಡ, ಎಚ್.ಡಿ. ನದಾಪ್, ಮುಲ್ಲ ಶಿರೂರ, ವಿಜು ಕಮತಗಿ, ಎಚ್.ಎಲ್. ರೇಷ್ಮಿ, ಸೈಫುದ್ದಿನ್ ಕಲಾದಗಿ, ಜ್ಯೋತಿಬಾ ದೇವರೆ, ದುರುಗಪ್ಪ ಮಾದರ, ಮುತ್ತಪ್ಪ ಹುಗ್ಗಿ, ಗೋವಿಂದ ಬಳ್ಳಾರಿ, ಮುತ್ತು ಜೋಳದ, ಈಶ್ವರ ಕೇಶಪ್ಪನವರ ಪಾಲ್ಗೊಂಡಿದ್ದರು.ಜಿಲ್ಲಾ ಬಿಎಸ್‌ಪಿ ಕಚೇರಿ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾ ಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರ ಆರ್.ಕಾಂಬಳೆ, ಅಂಬೇಡ್ಕರ್ ಅವರ ಸಂದೇಶಗಳನ್ನು ದೇಶದ ಜನರು ಕಟ್ಟುನಿಟ್ಟಾಗಿ ಪರಿಪಾಲಿಸ ಬೇಕಾಗಿದೆ ಎಂದರು.ಸಂವಿಧಾನ ಜಾರಿಯಾದಾಗಿನಿಂದ ಇಲ್ಲಿಯ ವರೆಗೆ ಬಾಬಾ ಸಾಹೇಬರ ಹೋರಾಟದ ಋಣವನ್ನು ಉಂಡ ಸಮುದಾ ದವರು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನೆಡೆಯ ಬೇಕು ಎಂದರು.

ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ಗುರುಶಾಂತಪ್ಪ ಮದೀನಕರ ಮಾತನಾಡಿ, ಶೋಷಿತರು ಆಳುವ ವರ್ಗವಾ ಗಬೇಕು, ಆಗ ಮಾತ್ರ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂಬ ಅಂಬೇಡ್ಕರ್ ಅವ ಆಶಯವನ್ನು ಈಡೇರಿಸ ಬೇಕಾಗಿದೆ ಎಂದು ಹೇಳಿದರು.ಹನಮಂತ ನಾಗನೂರ, ತಿಪ್ಪಣ್ಣ ನಾಯಕ, ದಿಲೀಪ್ ಕಾಂಬಳೆ, ಪರಶುರಾಮ ಟಿ. ಸಾನಕ್ಯನವರ ಮತ್ತಿತರರು ಉಪಸ್ಥಿತರಿದ್ದರು.

ಸ್ಕೌಟ್ ಮತ್ತು ಗೈಡ್ಸ್: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ವತಿಯಿಂದ ನಡೆದ ಗಣರಾಜೋತ್ಸವದಲ್ಲಿ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್. ಪಾಟೀಲ ಧ್ವಜಾರೋಹಣ ನೆರವೇರಿಸಿದರು.ಮಕ್ಕಳು ಶಿಸ್ತು, ಶಾಂತಿ, ಸೇವಾ ಮನೋಭಾವ ಮೈಗೂಡಿಸಿ ಕೊಳ್ಳಬೇಕು ಎಂದು ಅವರು ಹೇಳಿದರು. ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎನ್. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಸಿ.ಎ. ಸಾವಳಗಿ, ಜಿ.ಬಿ.ಇದ್ದಲಗಿ, ಎನ್. ಬಿ. ಯಳ್ಳಿಗುತ್ತಿ, ಎಸ್.ಎಚ್. ಹತ್ತಿಮತ್ತೂರ ಭಾಗವಹಿಸಿದ್ದರು.ಬೇವೂರ ಆದರ್ಶ ಮಹಾವಿದ್ಯಾಲಯ: ಬಾಗಲಕೋಟೆ ತಾಲ್ಲೂಕಿನ ಬೇವೂರದ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಗಣರಾಜೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ ಎಂ. ಸಜ್ಜನ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನತೆಯಲ್ಲಿ ಕಾಯಕ ಸಂಸ್ಕೃತಿ ಕಡಿಮೆಯಾಗುತ್ತಿದೆ, ಕಡಿಮೆ ಶ್ರಮ-ಹೆಚ್ಚು ಸಂಪಾದನೆ ಎಂಬುದು ಇಂದಿನ ಯುವಜನತೆಯ ಸಂಸ್ಕೃತಿ ಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯೆ ಶೋಭಾ ಪರಪ್ಪ, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಗುನ್ನಿ, ಸಂಸ್ಥೆಯ ಉಪಾಧ್ಯಕ್ಷ ಜಿ.ಜಿ. ಮಾಗನೂರ, ಎಂಎಸ್. ವೈಜಾಪುರ, ಪಿಡಿಒ ನದಾಫ, ಪ್ರಾಚಾರ್ಯ ಜಿ.ಎಸ್. ಬಿಜಾಪುರ, ಬಿ.ಬಿ. ಬೇವೂರ, ಎನ್‌ಸಿಸಿ ಅಧಿಕಾರಿ ಜಿ.ಎಸ್. ಹುಚ್ಚೊಳ್ಳಿ, ದೈಹಿಕ ಶಿಕ್ಷಕ ತುರುಡಗಿ, ಶಿಕ್ಷಕ ರಾದ ಜೆ. ಕುಲಕರ್ಣಿ, ಜೆ.ಕೆ. ಮಲ್ಲಾಪುರ ಮತ್ತಿತರರು ಹಾಜರಿದ್ದರು.ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ, ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಮತಗಿ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ:

ಗತಕಾಲದ ಇತಿಹಾಸವನ್ನು ಅರಿತುಕೊಂಡು, ದೇಶ ಸೇವೆ ಮಾಡುವಂತಹ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಆರ್.ಟಿ. ದೇಶಪಾಂಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಮತಗಿ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಮೈದಾನ ದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ತ್ಯಕ್ಕೆ ಹೋರಾಟ ಮಾಡಿದಂತಹ ಮಹನೀ ಯರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಉತ್ತಮರಾಗಿ ಬದುಕಬೇಕು ಎಂದರು.ಕೋಶಾಧ್ಯಕ್ಷ ಎಂ.ಎಂ. ಜಮಖಂಡಿ ಧ್ವಜಾರೋ ಹಣ ನೆರವೇರಿಸಿದರು.

ಮುಖ್ಯಶಿಕ್ಷಕಿ ಎಸ್.ಎಚ್. ಶಾಬಾದಿ, ಮಹಿಳಾ ಬಿ.ಇಡಿ ಕಾಲೇಜ್ ಪ್ರಾಚಾರ್ಯ ಎ.ಎಸ್. ಮಲಘಾಣ, ಪದವಿ ಕಾಲೇಜು ಪ್ರಾಚಾರ್ಯ ವಿ.ಬಿ. ಹನಮಶೆಟ್ಟಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ವಿ. ಬಾಗೇವಾಡಿ, ಉಪನ್ಯಾಸಕ ಆರ್.ಎಂ. ಗೌಡರ, ವಿ.ಬಿ. ಬೀಡಿ, ಬಿ.ವಿ. ಬೀರಕಬ್ಬಿ, ಬಿ.ಎಚ್. ಕಂಬಾಳಿಮಠ, ಎ.ವೈ. ಹರಿಮತ, ಪ್ರಭು ಗುರುವಿನಮಠ, ಸಿದ್ದಣ್ಣ ಶೆಟ್ಟರ ಪಾಲ್ಗೊಂಡಿದ್ದರು.ಆಕರ್ಷಕ ಬೈಕ್ ರ‌್ಯಾಲಿ

ಕೆರೂರ: ಇಲ್ಲಿಯ  ಪ್ರಮುಖ ತರಕಾರಿ ಮಾರುಕಟ್ಟೆ ಆವರಣದಲ್ಲಿ ಪಟ್ಟಣ ಪಂಚಾತಿ  ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಅಧ್ಯಕ್ಷೆ ಯಲ್ಲೂಬಾಯಿ ಗ್ಯಾಟೀನ ಧ್ವಜಾರೋ ಹಣ ನೆರವೇರಿಸಿದರು.

ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ಧನಕೊಳ್ಳ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ತತ್ವ, ಸಿದ್ಧಾಂತ ಅನುಕರಣೀಯ ಎಂದರು.ಪ.ಂಪ. ಉಪಾಧ್ಯಕ್ಷ ರಾಚಪ್ಪ ಹುಂಡೇಕಾರ, ಸ್ಥಾಯಿ ಸಮಿತಿ ಅಧ್ಯಕ್ಷ ಬಂದಗಿಸಾಬ ಅತ್ತಾರ, ಬಿ.ಬಿ.ಸೂಳಿಕೇರಿ, ವಿಜಯಲಕ್ಷ್ಮೀ ಹೊನ್ನಳ್ಳಿ, ರಾಮಣ್ಣ ಮುದಕವಿ, ಲೇಖಪಾಲ ಯಲ್ಲಪ್ಪ ಪೂಜಾರ, ಎಂಜಿನಿಯರ್ ವೈ.ಎಸ್. ದೊಡಮನಿ,  ಸತೀಶ ಚವಡಿ ಪಾಲ್ಗೊಂಡಿದರು.ಕೆರೂರಿನ ಬಿಗ್-ಬಿ ಕ್ರೀಡಾ ಕಮಿಟಿಯ 30ಕ್ಕೂ ಹೆಚ್ಚು ಸದಸ್ಯರು ಪಟ್ಟಣದ  ಡಾ.ಅಂಬೇಡ್ಕರ್ ಸರ್ಕಲ್‌ನಿಂದ ಹಳಪೇಟೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಕಿಲ್ಲಾ, ಹೊಸಪೇಟೆ, ನೆಹರುನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೋಟಾರ್ ಬೈಕ್ ರ‌್ಯಾಲಿ ನಡೆಸಿದರು.ತ್ರಿವರ್ಣ ಧ್ವಜ ಎತ್ತಿ ಹಿಡಿದಿದ್ದ ಯುವಕರು ಒಕ್ಕೊರಲಿನೊಂದಿಗೆ `ಜೋರ್ ಸೇ ಬೋಲೊ, ಪ್ಯಾರ್ ಸೇ ಬೋಲೊ ಮೇರಾ ಹಿಂದೂಸ್ಥಾನ~ ಮೊದಲಾದ ಘೋಷಣೆಗಳನ್ನು ಕೂಗಿದರು.

ರ‌್ಯಾಲಿಯಲ್ಲಿ ಎ.ಕೆ.ದೇವನಾಳ, ರಾಕೇಶ ಕಮತಗಿಮಠ, ಪ್ರಶಾಂತ, ಸುನೀಲ ಚವಡಿ, ಸುಲೇಮಾನ, ಬಸು ಬಡಿಗೇರ, ದಿನೇಶ, ಯುನೂಸ್, ಟಿಪ್ಪು ಸುಲ್ತಾನ ಸಂಘದ ದಾದಾಪೀರ ಅತ್ತಾರ  ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)