ಜಿಲ್ಲೆ ಅಭಿವೃದ್ಧಿಗೆ 30ಕೋಟಿ

ಗುರುವಾರ , ಜೂಲೈ 18, 2019
28 °C

ಜಿಲ್ಲೆ ಅಭಿವೃದ್ಧಿಗೆ 30ಕೋಟಿ

Published:
Updated:

ಚಿಕ್ಕಮಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ 30ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿರು ವುದಾಗಿ ಶಾಸಕ ಸಿ.ಟಿ.ರವಿ ತಿಳಿಸಿದರು. ಅಂಬೇಡ್ಕರ್ ಭವನದಲ್ಲಿ ಭಾನುವಾರ ವಾಜಪೇಯಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ತಲಾ 20 ಸಾವಿರ ರೂಗಳ ಚೆಕ್ ಹಾಗೂ ಶೇ.22.75 ರ ಯೋಜನೆಯಡಿ ಆಯ್ಕೆ ಯಾಗಿರುವ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಾಜಪೇಯಿ ವಸತಿ ಯೋಜನೆಯಡಿ ನಗರಕ್ಕೆ 50ಲಕ್ಷ ರೂಪಾಯಿ ಬಿಡುಗಡೆ ಯಾಗಿದ್ದು, ಇನ್ನೆರಡು ವರ್ಷದಲ್ಲಿ 2 ಸಾವಿರ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ನೀಡಲಾಗುವುದು. ಈಗಾಗಲೇ ಗವನಹಳ್ಳಿ, ಉಪ್ಪಳ್ಳಿ, ಶಾಂತಿನಗರದಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ಈ ಸ್ಥಳದ ಆಸುಪಾಸಿನಲ್ಲಿ ಅಗತ್ಯ ಭೂಮಿ ಗುರುತಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1ಕೋಟಿ ರೂಪಾಯಿ ಮಂಜೂರಾಗಿದ್ದು, ಈಗ 25.95ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ನಗರಸಭಾ ವ್ಯಾಪ್ತಿಗೆ ಗೃಹಮಂಡಳಿ ಬಡಾವಣೆ ಸೇರ್ಪಡೆಗೊಂಡ ಬಳಿಕ ಅದರ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ತಿಳಿಸಿದರು.ರಸ್ತೆ ತುಂಬಾ ಗುಂಡಿ ಬಿದ್ದಿವೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ರಸ್ತೆ ಡಾಂಬರೀಕರಣ ಮಾಡಿದರೆ ಒಳಚರಂಡಿಗೆ ರಸ್ತೆಯನ್ನೆಲ್ಲ ಅಗೆಯಬೇಕಾದ  ಪರಿಸ್ಥಿತಿ ನಿರ್ಮಾಣವಾಗುತ್ತದೆ. ಡಾಂಬರೀಕರಣ ಮಾಡಿಯೂ ಪ್ರಯೋಜನಕ್ಕೆ ಬರುವುದಿಲ್ಲ. 57 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣವಾದರೆ ಇಡೀ ಚಿಕ್ಕಮಗಳೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ರವಿ ಹೇಳಿದರು.ಎಸ್.ಸಿ.ಪಿ. ಯೋಜನೆಯಡಿ ದಲಿತರು ವಾಸಿಸುವ ಬಡಾವಣೆಗಳನ್ನು ಗುರುತಿಸಿ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ.  ಪ್ರತಿದಿನ ಬೆಳಿಗ್ಗೆ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸಮಸ್ಯೆ ಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅಗತ್ಯ ನಿವೇಶನ ಗುರುತಿಸಲಾಗಿದೆ. ಮುಂ ದಿನ ಆಶ್ರಯ ಸಮಿತಿ ಸಭೆಯಲ್ಲಿ ತೀ ರ್ಮಾನ ಕೈಗೊಳ್ಳಲಾಗುವುದು ಎಂದರು.ನಗರಸಭೆ ಅಧ್ಯಕ್ಷ ಡಿ.ಕೆ.ನಿಂಗೇಗೌಡ ಮಾತನಾಡಿ, ಈಗ ನೀಡುತ್ತಿರುವ ಚೆಕ್‌ಗಳನ್ನು ವಸತಿ ನಿರ್ಮಾಣಕ್ಕೆ ಸದು ಪಯೋಗ ಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಉಪಾಧ್ಯಕ್ಷೆ  ಹಿತಾಕ್ಷಿ, ಬಿಜೆಪಿ ನಗರಸಮಿತಿ ಅಧ್ಯಕ್ಷ ನಾರಾಯಣ ಗೌಡ, ಆಯುಕ್ತ ಕೃಷ್ಣಮೂರ್ತಿ, ನಗರಸಭೆ ಆಶ್ರಯ ಸಮಿತಿ ಸದಸ್ಯ ಮನೋಹರ್, ನಗರಸಭಾ ಸದಸ್ಯರಾದ ಪ್ರೇಮ್ ಕುಮಾರ್, ಪುಷ್ಪರಾಜ್, ಮುತ್ತಯ್ಯ, ನರಸಿಂಹ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry