`ಜಿಸ್ಮ್3'ಗೆ ಮೊದಲು `ಕ್ಯಾಬರೆ'!

7

`ಜಿಸ್ಮ್3'ಗೆ ಮೊದಲು `ಕ್ಯಾಬರೆ'!

Published:
Updated:
`ಜಿಸ್ಮ್3'ಗೆ ಮೊದಲು `ಕ್ಯಾಬರೆ'!

`ಜಿಸ್ಮ್ 3' ಚಿತ್ರ ನಿರ್ದೇಶಿಸುವ ಮೊದಲೇ ಪೂಜಾ ಭಟ್ `ಕ್ಯಾಬರೆ' ಚಿತ್ರ ನಿರ್ದೇಶಿಸಲು ತೀರ್ಮಾನಿಸಿದ್ದಾರಂತೆ. ಭಾರತೀಯ ಚಿತ್ರರಂಗದಲ್ಲಿ ಐಟಮ್ ಗೀತೆಗಳ ಬಗ್ಗೆ ಇದೀಗ ಬಿಸಿಬಿಸಿ ಚರ್ಚೆ ಸಾಗಿದೆ. ಹಾಗಂತೆ, ಹೀಗಂತೆ ಎಂಬಂಥ ಮಾತುಗಳೇ ಢಾಳಾಗಿವೆ. ಆದರೆ ಭಾರತೀಯ ಐಟಂ ಹಾಡು ಹಾಗೂ ನೃತ್ಯಗಳ ಬಗ್ಗೆಯೇ ಚಿತ್ರವನ್ನು ನಿರ್ದೇಶಿಸಲಿದ್ದೇನೆ. ಇದರ ಹೆಸರು `ಕ್ಯಾಬರೆ' ಎಂದು ಪೂಜಾ ಭಟ್ ಘೋಷಿಸಿದ್ದಾರೆ.`ಜಿಸ್ಮ್-2 ಚಿತ್ರ ಬಿಡುಗಡೆಯಾಗಿ ಸ್ವಲ್ಪವೇ ದಿನಗಳಾಗಿವೆ. ಈಗಲೇ ಜಿಸ್ಮ್ 3 ನಿರ್ದೇಶಿಸುವುದು ಸೂಕ್ತವಲ್ಲ. ಜನಮಾನಸದಿಂದ ಮೊದಲ ಚಿತ್ರ ಮರೆಯಾಗಬೇಕು. ಆಗ ಮಾತ್ರ ಮುಂದಿನ ಚಿತ್ರದ ಪಾತ್ರಗಳು ಹಾಗೂ ಕತೆಯನ್ನು ಪ್ರೇಕ್ಷಕರು ಸ್ವೀಕರಿಸಲು ಸಾಧ್ಯ' ಎನ್ನುವುದು ಅವರ ಅಭಿಪ್ರಾಯವಾಗಿದೆ.ಮಹೇಶ್ ಭಟ್ ಹಾಗೂ ಶಾಗುಪ್ತ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮಹೇಶ್ ಸಾಹೇಬರು ನನ್ನ ಪ್ರೇರಣೆ. ಶಾಗುಫ್ತ ದುಬೈನಲ್ಲಿ ಹಾಡು ಹಾಗೂ ಸಮೂಹ ನೃತ್ಯದಲ್ಲಿಯೂ ಭಾಗವಹಿಸಿದ ಅನುಭವ ಇರುವ ಕಲಾವಿದೆ. ಅವರನ್ನೂ ಚಿತ್ರದಲ್ಲಿ ಎಲ್ಲಿಯಾದರೂ ಬಳಸಿಕೊಳ್ಳುವ ಯೋಚನೆ ಇದೆ ಎಂದು ಪೂಜಾ ಭಟ್ ಹೇಳಿದ್ದಾರೆ.ಈ ಚಿತ್ರವೂ `ಚಾಂದನಿ ಬಾರ್'ನಂಥ ಧಾಟಿಯ ಕತೆಯಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ, ಇದು ಸಂಪೂರ್ಣವಾಗಿ ಸಂಗೀತ ಹಾಗೂ ನೃತ್ಯಮಯ ಚಿತ್ರವಾಗಿದೆ. ಸಾಧ್ಯವಿದ್ದಲ್ಲಿ 3ಡಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಭಿನ್ನ ಚಿತ್ರವಾಗಲಿದೆ. ಈ ಚಿತ್ರದಲ್ಲಿ ಐಟಂ ಸಾಂಗುಗಳ ಬಗೆಗಿನ ಹೊಸ ಭಾಷ್ಯವನ್ನೇ ಬರೆಯಲಾಗುವುದು ಎಂದು ಪೂಜಾ ಹೇಳಿದ್ದಾರೆ. ್ಢ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry