ಜಿ–20 ಸಭೆಯ ನಿರ್ಣಯ ಅನುಷ್ಠಾನ: ಭಾರತ ಒತ್ತಾಯ

6

ಜಿ–20 ಸಭೆಯ ನಿರ್ಣಯ ಅನುಷ್ಠಾನ: ಭಾರತ ಒತ್ತಾಯ

Published:
Updated:

ನವದೆಹಲಿ (ಪಿಟಿಐ): ಜಿ– 20 ಸಂಘ­ಟನೆಯ ವಿಶ್ವಾಸಾರ್ಹತೆ ಉಳಿಯ­ಬೇಕಾದರೆ ಆ ಸಭೆಯಲ್ಲಿ ತೆಗೆದು­ಕೊಂಡ ನಿರ್ಣಯಗಳನ್ನು ಬೇಗನೇ ಅನುಷ್ಠಾನಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ.ಇದೇ ವೇಳೆ, ಅಂತರರಾಷ್ಟ್ರೀಯ ಹಣ­ಕಾಸು ಸಂಸ್ಥೆಯ (ಐಎಂಎಫ್‌) ಮೀಸಲು ಸುಧಾರಣೆ ಜಾರಿ­ಗೊಳಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೋರುತ್ತಿರುವ ನಿರಾಸಕ್ತಿ ಬಗ್ಗೆಯೂ ಭಾರತ ಕಳವಳ ವ್ಯಕ್ತಪಡಿಸಿದೆ.ಐಎಂಎಫ್‌ ಆಡಳಿತ ತತ್ವಗಳನ್ನು ಮತ್ತು ಬಂಡವಾಳ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಿಂದೇಟು ಹಾಕುತ್ತಿರುವುದು ಸ್ಪಷ್ಟ. ಈ ಧೋರಣೆಯಿಂದಾಗಿ ಜಿ–20 ಸಂಘಟ­ನೆಯ ವಿಶ್ವಾಸಾರ್ಹತೆಗೆ ಕುಂದುಂಟಾ­ಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಇಲ್ಲಿನ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.ಜಾಗತೀಕರಣದ ಸಂದರ್ಭದಲ್ಲಿ ಜಿ– 20 ಸಂಘಟನೆಯ ಪಾತ್ರ ಅರ್ಥಪೂಣವಾಗಬೇಕೆಂದರೆ, ಅದು ಸ್ಪಷ್ಟ ಹಾಗೂ ಖಚಿತವಾದ ಕಾರ್ಯ­ಸೂಚಿ ಹೊಂದಿರಬೇಕು. ಸಂಘಟನೆ­ಯು ವಿಶೇಷವಾಗಿ ಆರ್ಥಿಕ ಮತ್ತು ಹಣಕಾಸು ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನೇ ಕೇಂದ್ರೀಕರಿಸಿ ಗಣ­ನೀಯ ಕೊಡುಗೆ ನೀಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.ಡಿಸೆಂಬರ್‌ನಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ವಿಶ್ವ ವಾಣಿಜ್ಯ ಸಂಘ­ಟನೆಯ (ಡಬ್ಲುಟಿಒ) ಸಭೆ ನಡೆ ಯಲಿರುವ ಹಿನ್ನೆಲೆಯಲ್ಲಿ, ಡಬ್ಲುಟಿಒ ಸದಸ್ಯ ರಾಷ್ಟ್ರಗಳು ಜಿಗಟು ಧೋರಣೆ ತೊರೆಯುವಂತೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry