`ಜಿ. ನಾರಾಯಣ ಅವರ ವ್ಯಕ್ತಿತ್ವ ಆದರ್ಶನೀಯ'

7

`ಜಿ. ನಾರಾಯಣ ಅವರ ವ್ಯಕ್ತಿತ್ವ ಆದರ್ಶನೀಯ'

Published:
Updated:

ಬೆಂಗಳೂರು: `ಮಾನವೀಯ ಮೌಲ್ಯ ಹಾಗೂ  ನೈತಿಕ ಮೌಲ್ಯಗಳ ಸಾಕ್ಷಿ ಪ್ರಜ್ಞೆಯಂತಿದ್ದ ಜಿ.ನಾರಾಯಣ ಅವರ ವ್ಯಕ್ತಿತ್ವವೇ ಆದರ್ಶನೀಯ' ಎಂದು ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಶ್ಲಾಘಿಸಿದರು.ನಾಡೋಜ ಡಾ.ಜಿ. ನಾರಾಯಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಜಿ. ನಾರಾಯಣ ಅವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ನಾರಾಯಣ ಅವರು ಕನ್ನಡ ಕಟ್ಟಿ ಬೆಳೆಸುವ ಪಡೆಯನ್ನು ಕಟ್ಟಿದ್ದರು. ರೈತರು, ಬಡವರು ಹಾಗೂ ಜಾನಪದ ಕಲಾವಿದರ ಬಗ್ಗೆ ವಿಶೇಷವಾದ ಆಸ್ಥೆ ವಹಿಸುತ್ತಿದ್ದರು. ಅವರ ಮೇರು ವ್ಯಕ್ತಿತ್ವಕ್ಕೆ ಬೇರೆ ಹೋಲಿಕೆಯೇ ಇಲ್ಲ' ಎಂದು ತಿಳಿಸಿದರು.`ಪರಸ್ಪರ ಸಹಕಾರ ತತ್ವವನ್ನು ಅನುಸರಿಸಿ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಬೇಕು ಎಂಬುದು ಅವರ ವಾದ ವಾಗಿತ್ತು. ಖಾದಿ ಉದ್ಯೋಗ ದಂತಹ ಸ್ವದೇಶಿ ಚಿಂತನೆಗೆ ಒತ್ತು ನೀಡುತ್ತಿದ್ದ ಅವರು ಅಪ್ಪಟ್ಟ ಗಾಂಧಿವಾದಿಯಾಗಿದ್ದರು' ಎಂದು ಸ್ಮರಿಸಿಕೊಂಡರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, `ತಾಳ್ಮೆ, ಕಾರ್ಯಸಾಧಿಸುವ ಚಾಣಾಕ್ಷತನ ಹಾಗೂ ಜನರೊಂದಿಗೆ ಬೆರೆಯುವ ಅವರ ನಡವಳಿಕೆ ನನಗೆ ತುಂಬಾನೇ ಹಿಡಿಸಿತ್ತು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry