ಭಾನುವಾರ, ಮೇ 16, 2021
28 °C

ಜಿ-24: ಭಾರತಕ್ಕೆ ಅಧ್ಯಕ್ಷತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಅಭಿವೃದ್ಧಿಶೀಲ ದೇಶಗಳ `ಜಿ-24~ ಗುಂಪಿನ ಅಧ್ಯಕ್ಷತೆಯು ಮೂರು ದಶಕಗಳ ನಂತರ ಈಗ ಭಾರತಕ್ಕೆ ದೊರೆಯುತ್ತಿದೆ.ವಾಷಿಂಗ್ಟನ್‌ನಲ್ಲಿ ಇದೇ 22ರಂದು ನಡೆಯಲಿರುವ  ಅಭಿವೃದ್ಧಿ ಹೊಂದುತ್ತಿರುವ 24 ದೇಶಗಳ ಸಭೆಯ ಅಂತ್ಯದಲ್ಲಿ ಭಾರತ ಈ  ಗೌರವಕ್ಕೆ ಪಾತ್ರವಾಗಲಿದೆ. ದಕ್ಷಿಣ ಆಫ್ರಿಕಾದ ಹಣಕಾಸು ಸಚಿವ ಪಿ. ಜೆ. ಗೋರ್ಧನ್ ಅವರು ಪ್ರಣವ್ ಮುಖರ್ಜಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಸಭೆಯ ಜತೆಯಲ್ಲಿಯೇ `ಜಿ-24~ ದೇಶಗಳ ಸಭೆಯೂ ನಡೆಯಲಿದೆ. ಈ ಗುಂಪಿನ ದೇಶಗಳ ಮಧ್ಯೆ ಬಾಂಧವ್ಯ ಕುದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.ಈ ಗುಂಪು 1971ರಲ್ಲಿ  ಅಸ್ತಿತ್ವಕ್ಕೆ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.