ಬುಧವಾರ, ನವೆಂಬರ್ 13, 2019
25 °C

ಜಿ 8 ಬಸ್ ಬೇಕು

Published:
Updated:

ಜಾಲಹಳ್ಳಿ -ಮತ್ತೀಕೆರೆ -ಮೇಖ್ರಿ ವೃತ್ತದ ಮಾರ್ಗವಾಗಿ ಎಂ.ಜಿ. ರಸ್ತೆಗೆ ಪ್ರತಿದಿನ ಬಹಳಷ್ಟು ಮಂದಿ ಪ್ರಯಾಣಿಸುತ್ತಾರೆ. ಆದರೆ ಈ ಮಾರ್ಗವಾಗಿ ಶಿವಾಜಿನಗರಕ್ಕಷ್ಟೇ ಬಸ್‌ಗಳಿವೆ. ನೆಲಮಂಗಲದಿಂದ ಎಂ.ಜಿ. ರಸ್ತೆಗೆ ಜಿ-8 ಸಂಖ್ಯೆಯ ಬಸ್‌ಗಳು ಈಗಾಗಲೇ ಸಂಚರಿಸುತ್ತಿವೆ.ಇದೇ ಮಾದರಿಯಲ್ಲಿ ಬೆಳಿಗ್ಗೆ ಎಂ.ಜಿ. ರಸ್ತೆ ಕಡೆಗೂ ಎಂ.ಜಿ. ರಸ್ತೆಯಿಂದ ಸಂಜೆ 5ರಿಂದ 8ರವರೆಗೆ ಜಾಲಹಳ್ಳಿ ಮಾರ್ಗಕ್ಕೆ ಜಿ-8 ಸಂಖ್ಯೆ ಬಸ್‌ಗಳನ್ನು ಬಿಡಬೇಕು. ಈ ಮೂಲಕ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಜೊತೆಗೆ ಈ ಭಾಗಕ್ಕೆ ಬರುವ ಉದ್ಯೋಗಸ್ಥರಿಗೂ ಅನುಕೂಲ ಮಾಡಿಕೊಡಬೇಕು.ಸಂಜೆ ವೇಳೆ ಗಂಟೆಗೊಂದು ಬಸ್ ಬರುತ್ತದೆ. ಹಾಗಾಗಿ ಶಿವಾಜಿನಗರದಿಂದ ಹೊರಡುವ ಬಸ್‌ಗಳು ಭರ್ತಿಯಾಗಿ ಜೇಬುಗಳ್ಳತನ ಹೆಚ್ಚಾಗುತ್ತಿದೆ.ಈ ಬಗ್ಗೆ ಅನೇಕ ಬಾರಿ `ಮೆಟ್ರೊ' ಕುಂದು ಕೊರತೆ ವಿಭಾಗದಲ್ಲಿ ಪತ್ರಗಳನ್ನು ಬರೆಯಲಾಗಿದೆ. ಆದರೂ ಬಿಎಂಟಿಸಿ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟವರು ಶೀಘ್ರವೇ ಈ ಮಾರ್ಗಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು.

 

ಪ್ರತಿಕ್ರಿಯಿಸಿ (+)