ಜೀತವಿಮುಕ್ತರ ಪುನರ್ವಸತಿಗೆ ಆಗ್ರಹ

7

ಜೀತವಿಮುಕ್ತರ ಪುನರ್ವಸತಿಗೆ ಆಗ್ರಹ

Published:
Updated:

ಗುಡಿಬಂಡೆ: ತಾಲ್ಲೂಕಿನಲ್ಲಿ ಜೀತದಿಂದ ವಿಮುಕ್ತಿಗೊಂಡವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ  ದೃಢ ನಿರ್ಧಾರ ತೆಗೆದುಕೊಂಡು ಶಾಶ್ವತ ನೆಲೆ ಒದಗಿಸಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ ಆಗ್ರಹಿಸಿದರು.ಜೀತ ಪದ್ದತಿ ನಿರ್ಮೂಲನೆ ದಿನಾ ಚರಣೆ ಅಂಗವಾಗಿ ಜೀತ ವಿಮುಕ್ತಿ ಕರ್ನಾಟಕ(ಜೀವಿಕ) ಸಂಘಟನೆ ಇಲ್ಲಿನ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ  ಜೀತದಾಳು ಪುನ ರ್ವಸತಿ ಕಾರ್ಯಾಗಾರದಲ್ಲಿ  ಮಾತನಾಡಿದರು.ತಹಶೀಲ್ದಾರ್ ಮುನಿವೀರಪ್ಪ  ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಯೋಗೀಶ್ವರಿ ವಿಜಯ್, ತಾ.ಪಂ. ಉಪಾಧ್ಯಕ್ಷ ನಾರಾ ಯಣಸ್ವಾಮಿ, ಪ.ಪಂ. ಅಧ್ಯಕ್ಷೆ ಜಬೀನ್‌ತಾಜ್, ಉಪಾಧ್ಯಕ್ಷ ಇಸ್ಮಾಯಿಲ್ ಅಜಾದ್, ಸಂಪನ್ಮೂಲ ವ್ಯಕ್ತಿ ವಿಶ್ವನಾಥ್, ಪ.ಪಂ.ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಜೀವಿಕ ರಾಜ್ಯ ಸಂಚಾ ಲಕ ಗೋಪಾಲ್, ತಾಲ್ಲೂಕು ದಲಿತ ಮುಖಂಡರಾದ ಜಿ.ವಿ.ಗಂಗಪ್ಪ, ಪ್ರೆಸ್ ಸುಬ್ಬರಾಯಪ್ಪ ಭಾಗವಹಿಸಿದ್ದರು.

ಜೀವಿಕ ಸಂಚಾಲಕ ಬೀಚಗಾನಹಳ್ಳಿ ನಾರಾಯಣಸ್ವಾಮಿ ನಿರೂಪಿಸಿದರು, ಅಮರಾವತಿ ಸ್ವಾಗತಿಸಿದರು. ಚೆನ್ನರಾಯಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry