ಜೀತ ಪದ್ಧತಿ ಇದ್ದರೆ ಮಾಹಿತಿ ನೀಡಿ

7

ಜೀತ ಪದ್ಧತಿ ಇದ್ದರೆ ಮಾಹಿತಿ ನೀಡಿ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜೀತ ಪದ್ಧತಿ ಪ್ರಕರಣಗಳು ವರದಿಯಾಗಿಲ್ಲ, ಆದರೂ ತೋಟಗಾರಿಕೆ ಜಿಲ್ಲೆಯಾಗಿರುವುದರಿಂದ ಎಸ್ಟೇಟ್‌ಗಳಲ್ಲಿ ಇಂತಹ ಪರಿಸ್ಥಿತಿಗಳೇನಾದರೂ ಇದೆಯೇ ಎಂಬ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್.ವಿ.ಪ್ರಸಾದ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೊಡಗು ಜಿಲ್ಲೆಯ ಜಿಲ್ಲಾಮಟ್ಟದ ಜೀತ ಪದ್ಧತಿ (ನಿರ್ಮೂಲನಾ) ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜೀತ ಪದ್ಧತಿ ಇಂದು ಸಾಮಾಜಿಕ ಅನಿಷ್ಟವಾಗಿದ್ದು ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಎಲ್ಲರು ಕೈಜೋಡಿಬೇಕಿದೆ ಎಂದು ಹೇಳಿದರು.ಜೀತ ಪದ್ಧತಿಯಡಿ ಶೋಷಿತರಾದವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ವಸತಿ ಸೌಲಭ್ಯ, ಸಹಾಯಧನ, ಸ್ವಯಂ ಉದ್ಯೋಗ ತರಬೇತಿ. ಬ್ಯಾಂಕ್‌ಗಳ ಮೂಲಕ ಸಾಲ ಹೀಗೆ ಹಲವು ರೀತಿಯ ನೆರವನ್ನು ಒದಗಿಸಲಾಗುವುದು ಎಂದರು.ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮಾತನಾಡಿ, ಸಂಪೂರ್ಣ ನಿರ್ಬಂಧ ಹೇರಿ ಸರಿಯಾಗಿ ಸಂಬಳ ನೀಡದೇ ದುಡಿಸುತ್ತಿರುವ ಪ್ರಕರಣಗಳ ನಿರ್ದಿಷ್ಟವಾಗಿ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಅವರು ಮಾತನಾಡಿ, ಬಡವರನ್ನು ಸರಿಯಾದ ವೇತನ ಊಟ ತಿಂಡಿಯನ್ನು ನೀಡದೆ ವೇಳೆಯ ಪರಿಮಿತಿ ಇಲ್ಲದಂತೆ ದುಡಿಸಿಕೊಳ್ಳುವ ವ್ಯವಸ್ಥೆಯನ್ನು ಜೀತ ಪದ್ಧತಿ ಎಂದು ಪರಿಗಣಿಸಬಹುದು ಎಂದರು.ಅಪರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮಾತನಾಡಿ, ಜೀತ ಪದ್ಧತಿ ನಿರ್ಮೂನೆ ಮೇಲ್ವಿಚಾರಣೆಗಾಗಿ ಸರ್ಕಾರ ಸಮಿತಿ ರಚಿಸಿದೆ. ಆದರೆ ಗ್ರಾಮಾಂತರ  ಪ್ರದೇಶಗಳಲ್ಲಿ ಇಂತಹ ಪದ್ಧತಿ ಅನುಕರಣೆಯಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಸಮಿತಿ ಸದಸ್ಯ ತಾಕೇರಿ ಪೊನ್ನಪ್ಪ, ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ ದಿನೇಶ್ ಅವರು ಮಾತನಾಡಿ, ಜಿಲ್ಲೆಯ ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳ ಕಲವೆಡೆ ಬಲವಂತವಾಗಿ ದುಡಿಸಿಕೊಳ್ಳುತ್ತಿರುವ ಕಡಿಮೆ ವೇತನ ನೀಡುತ್ತಿರುವ ಪ್ರಕರಣಗಳನ್ನು ತಾವು  ಗಮನಿಸಿರುವುದಾಗಿ ಹೇಳಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್‌ಗೌಡ  ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಯತಿಾಜ್, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಹ್ಯಾರಿಸ್, ಸಮಿತಿ ಸದಸ್ಯರಾದ ಆಶಾ ಚಿಣ್ಣಪ್ಪ, ಅರಪಟು ಗ್ರಾಮದ ಎಚ್.ಕೆ.ಜಾನಕಿ, ಚೆಂಬು ಗ್ರಾಮದ ಎಚ್.ಕೆ. ಜಾನಕಿ  ಮತ್ತಿತರು ಸಭೆಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry