ಜೀಪ್‌–ಶಾಲಾ ಬಸ್‌ ಡಿಕ್ಕಿ 3 ಸಾವು

7

ಜೀಪ್‌–ಶಾಲಾ ಬಸ್‌ ಡಿಕ್ಕಿ 3 ಸಾವು

Published:
Updated:

ಸಿಂಧನೂರು: ತಾಲ್ಲೂಕಿನ ಪೋತ್ನಾಳ ಹಳ್ಳದ ಬಳಿ ಇರುವ ಡಾಬಾ ಹತ್ತಿರ ರಾಯಚೂರು -ಗಂಗಾವತಿ ಮುಖ್ಯ­ರಸ್ತೆಯಲ್ಲಿ ಬುಧವಾರ ಸಂಜೆ ಬೊಲೆರೊ ಜೀಪ್‌ ಹಾಗೂ  ಶಾಲಾ ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು, ನಾಲ್ವರು ಗಾಯ­ಗೊಂಡಿದ್ದಾರೆ.ಜೀಪ್‌ ಚಾಲಕ ಗಂಗನಗೌಡ (35), ಸಿರಾಜ್ (45), ಬಾಷಾಸಾಬ ದೊಡ್ಡಮನಿ (60) ಮೃತಪಟ್ಟವರು. ರಸೂಲ್ ಸಾಬ, ಬಸವರಾಜ ಸಾಳೇರ್, ಬಾಬುಸಾಬ, ಬಸವರಾಜ ಬಡಿಗೇರ ಗಾಯಗೊಂಡಿದ್ದಾರೆ. ಇವರೆಲ್ಲರೂ ದೇವದುರ್ಗ ತಾಲ್ಲೂಕಿನ ರಾಮದುರ್ಗ­ದವರು. ಶಾಲಾ ಬಸ್‌ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಗಂಗನಗೌಡರ ಎತ್ತುಗಳನ್ನು ಸಿಂಧ­ನೂರು ತಾಲ್ಲೂಕಿನ ಗೊರೇಬಾಳ ಕ್ಯಾಂಪಿಗೆ ಗಣಪತಿ ಮೆರವಣಿಗೆಗೆಂದು ಕರೆ­ತರಲಾಗಿತ್ತು. ತಮ್ಮ ಎತ್ತುಗಳನ್ನು ನೋಡುವ ಉದ್ದೇಶದಿಂದ ಗಂಗನಗೌಡ ಗ್ರಾಮದ ಆರು ಜನರನ್ನು ತನ್ನೊಂದಿಗೆ ಕರೆದುಕೊಂಡು ಗೊರೇಬಾಳ ಕ್ಯಾಂಪಿಗೆ ಬಂದ್ದಿದ್ದರು. ಮೆರವಣಿಗೆ ಮುಗಿಸಿ­ಕೊಂಡು ವಾಪಸ್ ತೆರಳುವ ಸಮಯ­ದಲ್ಲಿ ಅಪಘಾತ ನಡೆದಿದೆ ಎಂದು ಬಳಗಾನೂರು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry