ಜೀಪ್ ಬರುತ್ತಿದೆ!

7

ಜೀಪ್ ಬರುತ್ತಿದೆ!

Published:
Updated:
ಜೀಪ್ ಬರುತ್ತಿದೆ!

ರಿನೋ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ಸ್‌ಗೆ ಸ್ಪರ್ಧಿಯಾಗಿ ಫಿಯೆಟ್ ಕಂಪೆನಿಯು ಜೀಪ್ ಕಂಪೆನಿಯ ಎಸ್‌ಯುವಿ ರ‌್ಯಾಂಗ್ಲರ್ ಎಂಬ ಪರಿಪೂರ್ಣ ಎಸ್‌ಯುವಿ ಪರಿಚಯಿಸಲು ಸಕಲ ಸಿದ್ಧತೆ ನಡೆಸಿದೆ.ಜೀಪ್ ಕಂಪೆನಿಯ ವಾಹನಗಳು ಈ ಹಿಂದೆ ಭಾರತದಲ್ಲಿದ್ದವು. ಅದರಿಂದಾಗಿಯೇ ಇಂದು ಒಂದು ಶ್ರೇಣಿಯ ವಾಹನಗಳಿಗೆ ಇಂದಿಗೂ `ಜೀಪ್' ಎಂದೇ ಕರೆಯಲಾಗುತ್ತದೆ. ಆದರೆ ಇದು ಭಾರತದಲ್ಲಿ ಜೀಪ್ ಕಂಪೆನಿಯ ಎರಡನೇ ಇನ್ನಿಂಗ್ಸ್. ಹೀಗಾಗಿ ಭಾರತದಲ್ಲಿನ ತನ್ನ ಯೋಜನೆ ಅನಾವರಣಗೊಳಿಸಿರುವ ಜೀಪ್ ರ‌್ಯಾಂಗ್ಲರ್ ರೂಬಿಕಾನ್ ಹಾಗೂ ಗ್ರಾಂಡ್ ಶೆರೊಕೀ ಎಂಬ ಎರಡು ಮಾದರಿಯ ಎಸ್‌ಯುವಿಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಪರಿಚಯಿಸಲಿದೆ.ಬಿ ಹಾಗೂ ಸಿ ಶ್ರೆಣಿಯ ಸಣ್ಣ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸಿರುವ ಜೀಪ್ ಕಂಪೆನಿಯನ್ನು ಇತ್ತೀಚೆಗೆ ಫಿಯೆಟ್ ಖರೀದಿಸಿತ್ತು. ಜೀಪ್ ಕಂಪೆನಿಯ ಈ ವಾಹನಗಳು ಭಾರತದಲ್ಲೇ ಸಿದ್ಧಗೊಳ್ಳಲಿವೆ. ಭಾರತದಿಂದ ಇತರ ರಾಷ್ಟ್ರಗಳಿಗೆ ರಫ್ತಾಗಲಿದೆ. ಜೀಪ್ ರ‌್ಯಾಂಗ್ಲರ್ ಎಸ್‌ಯುವಿ 10-12 ಲಕ್ಷ ರೂಪಾಯಿಗೆ ಬಿಡುಗಡೆ ಮಾಡುವತ್ತ ಚಿಂತಿಸಿರುವ ಜೀಪ್, ಇದು ರಿನೋ ಡಸ್ಟರ್, ಫೋರ್ಡ್ ಎಕೊಸ್ಪೋರ್ಟ್ಸ್ ಹಾಗೂ ಮಹೀಂದ್ರಾ ಕ್ವಾಂಟೊ ಕಾರಿಗೆ ಸ್ಪರ್ಧೆಯೊಡ್ಡಲಿದೆ ಎಂದು ಅಂದಾಜು ಮಾಡಲಾಗಿದೆ.ಜೀಪ್‌ನ ಬಿ ಶ್ರೇಣಿಯ ಎಸ್‌ಯುವಿ 1.4ಲೀ ಸಾಮರ್ಥ್ಯದ ಪೆಟ್ರೋಲ್ ಹಾಗೂ ಫಿಯೆಟ್‌ನ 1.6ಲೀ. ಸಾಮರ್ಥ್ಯದ ಮಲ್ಟಿಜೆಟ್ ಡೀಸಲ್ ಎಂಜಿನ್‌ಗಳಲ್ಲಿ ಲಭ್ಯ. ಇನ್ನು ಜೀಪ್ ಸಿ ಶ್ರೇಣಿಯ ಎಸ್‌ಯುವಿ ಕೂಡಾ ಭಾರತದಲ್ಲೇ ತಯಾರಾಗಲಿದ್ದು, ಇದರ ಬೆಲೆ ರೂ. 14-15 ಲಕ್ಷ ಇರಲಿದೆ. ಈ ಮೂಲಕ ಮಹೀಂದ್ರಾ ಎಕ್ಸ್‌ಯುವಿ 500ಗೆ ಸ್ಪರ್ಧೆ ನೀಡಲಿದೆ.ಡಸ್ಟರ್ ಹಾಗು ಕ್ವಾಂಟೊ ಮಾರುಕಟ್ಟೆಗೆ ಫೋರ್ಡ್ ಕಂಪೆನಿಯ ಎಕೋಸ್ಪೋರ್ಟ್ಸ್ ಮೂಲಕ ಲಗ್ಗೆ ಇಟ್ಟರೆ ನಂತರದಲ್ಲಿ ಫಿಯೆಟ್ ಕಂಪೆನಿಯ ಜೀಪ್‌ನ ಎರಡು ಮಾದರಿಗಳನ್ನು ಸ್ಪರ್ಧೆಗೆ ಒಡ್ಡಲಿದೆ. ಒಟ್ಟಿನಲ್ಲಿ 2013ರಲ್ಲಿ ಹೊಸ ಬಗೆಯ ಎಸ್‌ಯುವಿಗಳು ಭಾರತದ ರಸ್ತೆಗಿಳಿಯಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry