ಸೋಮವಾರ, ಮೇ 16, 2022
28 °C

ಜೀವಕ್ಕೆ ಎರವಾದರೂ ಎಚ್ಚೆತ್ತುಕೊಳ್ಳದ ಜೆಸ್ಕಾಂ

ಪ್ರಜಾವಾಣಿ ವಾರ್ತೆ/ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಈ ಪ್ರದೇಶದಲ್ಲಿ ಮದುವೆ ಮತ್ತಿತರ ಸಮಾರಂಭ ಆಯೋಜಿಸಿದರೆ  ಪ್ರತ್ಯೇಕ ಶಾಮಿಯಾನಾ ಹಾಕಿಸುವ ಅಗತ್ಯವೇ ಇಲ್ಲ. ಬದಲಿಗೆ, ರಸ್ತೆಯ ಎರಡೂ ಅಂಚಿನಲ್ಲಿರುವ ವಿದ್ಯುತ್ ಕಂಬ ಗಳಿಂದ ಪಂಜರದಂತೆ ಚಾಚಿ ಕೊಂಡಿರುವ ವಿದ್ಯುತ್ ತಂತಿಗಳ ಮೇಲೆ ಒಂದು ವಿಶಾಲವಾದ ಬಟ್ಟೆ ಹಾಕಿದರೂ ಸಾಕು ಶಾಮಿಯಾನಾ ಸಿದ್ಧಗೊಳ್ಳುತ್ತದೆ.ಇದು ನಗರದ ಹೂವಿನ ಬಝಾರ್ ಪ್ರದೇಶದಲ್ಲಿನ ಪಿಂಜಾರ ಓಣಿ ಸೇರಿದಂತೆ ವಿವಿಧೆಡೆ ಇರುವ ಸಣ್ಣಪುಟ್ಟ ಗಲ್ಲಿಗಳಲ್ಲಿ ಕಂಡು ಬರುವ ಅಡ್ಡಾದಿಡ್ಡಿ ವಿದ್ಯುತ್ ತಂತಿಗಳ ಚಿತ್ರಣ. ಇಲ್ಲಿ ಜೋರಾಗಿ ಗಾಳಿ ಬೀಸುತ್ತಿ ದ್ದಂತೆಯೇ ವಿದ್ಯುತ್ ಕಂಬಗಳಲ್ಲಿನ ತಂತಿ ಗಳು ಒಂದಕ್ಕೊಂದು ತಾಕುತ್ತ ಕಿಡಿ ಹಾರಲಾರಂಭಿಸುತ್ತದೆ. ಯಾವು ದಾದರೂ ಕ್ಷಣದಲ್ಲಿ ವಿದ್ಯುತ್ ತಂತಿಗಳು ಹರಿದು ಕೆಳಗೆ ಬೀಳುತ್ತ ಅಪಾಯದ ಮುನ್ಸೂಚನೆ ನೀಡುತ್ತವೆ. ಅಷ್ಟರ ಮಟ್ಟಿಗೆ ಇಲ್ಲಿನ ಜನರು ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಬದುಕುವ ಸ್ಥಿತಿ ಇದೆ.ತೀವ್ರ ಶಿಥಿಲಾವಸ್ಥೆಯಲ್ಲಿದ್ದ ವಿದ್ಯುತ್ ತಂತಿಯೊಂದು ತುಂಡರಿಸಿ ಕೆಳಗೆ ಬಿದ್ದ ಪರಿಣಾಮ, ಕಳೆದ ಜೂನ್ 24ರಂದು ಬೆಳಿಗ್ಗೆ ಶೇಕ್‌ಸಾಬ್ (40) ಮತ್ತು ಬಾಬುಸಾಬ್ (60) ಎಂಬುವವರು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತ ಪಟ್ಟಿರುವ ಘಟನೆ ಇದೇ ಪ್ರದೇಶದಲ್ಲಿ ಸಂಭವಿಸಿದೆ. ಇನ್ನೂ ಅನೇಕ ಬಾರಿ ಇಂತಹ ಅನೇಕ ಅಪಾಯಗಳನ್ನು ಇಲ್ಲಿನ ಜನತೆ ಎದುರಿ ಸಿದ್ದರೂ ಅದೃಷ್ಟವಶಾತ್ ಯಾವುದೇ ರೀತಿಯ ಜೀವಹಾನಿ ಸಂಭವಿ ಸಿಲ್ಲ. ಇಬ್ಬರ ಜೀವ ತೆಗೆದ ದುರ್ಘಟನೆ ನಡೆ ದರೂ ಇಂತಹ ಅಡ್ಡಾದಿಡ್ಡಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವ ಕಾರ್ಯ ವನ್ನು ಜೆಸ್ಕಾಂ ಸಿಬ್ಬಂದಿ ಆರಂಭಿಸದೇ ಇರುವುದು ಸಾರ್ವಜನಿಕರ ನೆಮ್ಮದಿ ಯನ್ನೇ ಕದಡಿದೆ.ಆ ದುರ್ಘಟನೆ ನಡೆದ ನಂತರ ಮನೆಯೆದುರಿನ ವಿದ್ಯುತ್ ತಂತಿ ಕಂಡೊಡನೆಯೇ ಅಲ್ಲಿನ ಜನ ಬೆಚ್ಚಿ ಬೀಳುವಂತಾಗಿದೆ. `ಯಾವುದಾದರೂ ತಂತಿ ಯಾವಾಗ ತಮ್ಮ ತಲೆಯ ಮೇಲೇ ಕತ್ತರಿಸಿ ಬಿದ್ದು ಜೀವ ತೆಗೆಯುತ್ತದೋ' ಎಂಬ ಆತಂಕ ಮನೆ ಮಾಡಿದೆ.ಗಾಳಿ ಬೀಸಿದಾಗ ಒಂದಕ್ಕೊಂದು ತಂತಿಗಳು ತಾಕಿ ಶಾರ್ಟ್ ಸರ್ಕಿಟ್ ಆಗು ವುದು ಇಲ್ಲಿ ಸಾಮಾನ್ಯ ಸಂಗತಿ. ಇಂತಹ ಶಿಥಿಲಗೊಂಡ ತಂತಿಗಳನ್ನು ಬದಲಿಸಿ, ಹೊಸ ತಂತಿ ಜೋಡಿಸುವ ಕಾರ್ಯ ವನ್ನು ಕೈಗೆತ್ತಿಕೊಳ್ಳುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಜೆಸ್ಕಾಂ ಕಿವಿಗೊಡುತ್ತಿಲ್ಲ ಎಂದು ಈ ಭಾಗದ ನಿವಾಸಿ ಮಲ್ಲಿಕಾರ್ಜುನ `ಪ್ರಜಾವಾಣಿ'ಗೆ ತಿಳಿಸಿದರು.ನಗರದಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಅಂಡರ್‌ಗ್ರೌಂಡ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾದರಿಯನ್ನು ಅನುಸರಿಸ ಲಾಗುತ್ತದೆ. ಅದೇ ಮಾದರಿಯನ್ನು ಹಳೆಯ ಸಂಪರ್ಕಗಳಿಗೂ ಅನುಸರಿಸಿ ದರೆ ಅಪಾಯ ತಪ್ಪಿಸಬಹುದಾಗಿದೆ. ಇದ ರಿಂದ ಸಾರ್ವಜನಿಕರ ಸುರಕ್ಷತೆಗೇ ಆದ್ಯತೆ ದೊರೆಯುವುದರಿಂದ ಎಲ್ಲರ ಸಹಕಾರ ದೊರೆಯಲಿದೆ. ಈ ಕುರಿತ ಸಲಹೆ ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.ಬೆಂಗಳೂರು ರಸ್ತೆಗೆ ಅಂಟಿ ಕೊಂಡಿ ರುವ ಹೂವಿನ ಬಝಾರ್, ಪಿಂಜಾರ ಓಣಿ, ನಂದೇರ ಓಣಿ, ಕಮಿಂಗ್ ರಸ್ತೆ, ಸಿಂದಗಿ ಓಣಿ, ಕಾಳಮ್ಮ ಬೀದಿ, ಮಿಲ್ಲರ್ ಪೇಟೆ, ಮರಿಸ್ವಾಮಿ ಮಠ, ಅಲ್ಲಂ ಓಣಿ, ರೆಡ್ಡಿ ಬೀದಿ, ತೇರು ಬೀದಿ ಮತ್ತಿತರ ಮಾರುಕಟ್ಟೆ ಪ್ರದೇಶ ಗಳಲ್ಲಿ ವಿದ್ಯುತ್ ಕಂಬಗಳಲ್ಲಿ ಈ ರೀತಿಯ ಅವ್ಯವಸ್ಥೆ ಇದೆ. ಇತ್ತೀಚೆಗೆ ಇಬ್ಬರ ಪ್ರಾಣಕ್ಕೆ ಸಂಚಕಾರ ತಂದಂತಹ ಪ್ರಕರಣಗಳು ಮತ್ತೆ ಸಂಭ ವಿಸುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಅಶ್ವಿನ್ ತೀವ್ರ ಆತಂಕ ವ್ಯಕ್ತಪಡಿಸಿದರು.ಕ್ರಮ ಕೈಗೊಂಡಿಲ್ಲ: ಇತ್ತೀಚೆಗಷ್ಟೇ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಸ್ಕಾಂನ ಹಿರಿಯ ಅಧಿಕಾರಿಗಳು, ಆದಷ್ಟು ಬೇಗ ವಿದ್ಯುತ್ ತಂತಿ ಬದಲಿಸುವ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದರಾದರೂ ಇದುವರೆಗೂ ಈ ಪ್ರದೇಶಕ್ಕೆ ಸಂಸ್ಥೆಯ ಸಿಬ್ಬಂದಿ ಭೇಟಿ ನೀಡಿಲ್ಲ.`ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದ್ದ ರಿಂದ ಜೆಸ್ಕಾಂ ಸಿಬ್ಬಂದಿ ಪ್ರತಿಭಟನೆ ನಡೆಸಿ, ಸೂಕ್ತ ಸಿಬ್ಬಂದಿ, ಸೌಲಭ್ಯ, ಅನುದಾನ ಒದಗಿಸುವಂತೆ ಕೋರಿದ್ದು, ಇದುವರೆಗೂ ಸಂಸ್ಥೆಯಿಂದ ಸಕಾರಾತ್ಮಕ ವಾದ ಸ್ಪಂದನೆ ದೊರೆತಿಲ್ಲ. ಈ ರೀತಿ ಆದರೆ, ಸಾರ್ವಜನಿಕರ ಸಮಸ್ಯೆ ನೀಗಿ ಸುವುದಾದರೂ ಹೇಗೆ' ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.ಹೊಸ ಬಡಾವಣೆಗಳನ್ನು ಹೊರತು ಪಡಿಸಿ ಮಿಕ್ಕ ಕಡೆ ಇದೇ ರೀತಿಯ ವ್ಯವಸ್ಥೆ ಇದೆ. ಸಾರ್ವಜನಿಕರು ಹೊಸ ಮಾದ ರಿಯ ವಿದ್ಯುತ್ ಸಂಪರ್ಕ ಅಳವಡಿ ಸಿಕೊಳ್ಳಲು ಮುಂದಾಗಿ ಶುಲ್ಕ ಸಂದಾ ಯ ಮಾಡಲು ಮುಂದಾದರೆ ಜೆಸ್ಕಾಂ ಅದಕ್ಕೆ ಪ್ರೋತ್ಸಾಹ ನೀಡಲಿದೆ ಎಂದೂ ಅವರು ಹೇಳುತ್ತಾರೆ.ಶಾಸಕರು, ಸಚಿವರು, ಪಾಲಿಕೆ ಸದಸ್ಯರು, ಸಿಬ್ಬಂದಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ದರೂ, ಜನತೆ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿಯಿಂದ ದೂರವಾಗಿಲ್ಲ.ಮಳೆಗಾಲದಲ್ಲಿ ರಭಸದ ಗಾಳಿ ಬೀಸುವುದರಿಂದ ಅಂತಹ ದುರ್ಘಟನೆ ಗಳು ಮತ್ತೆ ನಡೆಯುವ ಸಾಧ್ಯತೆಯೂ ಇದ್ದ, ಮಹಾನಗರ ಪಾಲಿಕೆ, ಜೆಸ್ಕಾಂ ಹಾಗೂ ಜನಪ್ರತಿನಿಧಿಗಳು ಗಂಭಿರವಾಗಿ ಪರಿಗಣಿಸುವ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.