ಗುರುವಾರ , ಫೆಬ್ರವರಿ 25, 2021
29 °C
ಚಂದ ಪದ್ಯ

ಜೀವಜಾಲ ಸ್ಕೂಲಿನಲ್ಲಿ

ಕೃಷ್ಣಮೂರ್ತಿ ಬಿಳಿಗೆರೆ Updated:

ಅಕ್ಷರ ಗಾತ್ರ : | |

ಜೀವಜಾಲ ಸ್ಕೂಲಿನಲ್ಲಿ

ಅಂಕು ಡೊಂಕು ಹೊಲದದಾರಿ

ಬಿಸಿಲು ಮಳೆ ಎಲ್ಲ ಮೀರಿ

ಜೀವಜಾಲ ಸ್ಕೂಲಿನಲ್ಲಿ

ಪಾಠ ನಡೆಯುತಿರುವುದು

ಹೂವಿನಂತ ಉಕ್ಕೆಯಲ್ಲಿ

ಕಲ್ಲಿನಂತ ಮೊಳಕೆ

ಅಕ್ಕಡಿಯ ಸಾಲಿನಲ್ಲಿ

ಅವರೆ ಜೋಳ ಮೇಲಕೆ

ಬೀಜ ಬಿತ್ತಿ ನೆಲದ ಒಡಲು

ಎಲೆ ಎಲೆಯು ಅಕ್ಷರ

ಎರೆಯ ಹುಳ ಹಾಡುತ್ತಿದೆ

ಕಣಕಣವು ಆಹಾರಉರಿ ಮೋರೆಯ ಸೂರ್ಯ ಮೇಷ್ಟ್ರು

ಕನಸ ಚಿತ್ರ ಬರೆಸುವರು

ಹೂ ಮೋರೆಯ ಚಂದ್ರ ಮೇಡಂ

ಕತೆಯ ಕುದುರೆ ಓಡಿಸುವರು

ಮೋಡ ಹಾಡು ಹೇಳಿಕೊಂಡು

ಸುರಿಸುವುದು ಗಾಳಿ ಮಳೆಯ

ಮಣ್ಣು ಉಂಡ ಮರ ಗಿಡಗಳು

ಅನ್ನ ಕೊಡುವುದೆಂತು ಮಾಯ

ಕೋಟಿ ಬೇರು ಕೋಟಿ ಎಲೆ

ಕೋಟಿ ಕೀಟ ಗಣಿತ ಶಾಸ್ತ್ರ

ಎರೆಯ ಹುಳದ ಉಳುಮೆ ಪಾಠ

ಗೆದ್ದಲಿನ ಜೀವ ಶಾಸ್ತ್ರ

ಇದೇ ಜ್ಞಾನ ವಿಜ್ಞಾನ

ಇದೇ ವಿದ್ಯೆ ವಿವೇಕ

ಇದೇ ನಿಜ ಇದೇ ಮಜ

ಇದೇ ಸಹಜ ಜೀವ ಬೀಜ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.