ಜೀವನದಲ್ಲಿ ಶಿಸ್ತು, ಶ್ರದ್ಧೆ ಮೈಗೂಡಿಸಿಕೊಳ್ಳಲು ಕರೆ

ಶುಕ್ರವಾರ, ಜೂಲೈ 19, 2019
29 °C

ಜೀವನದಲ್ಲಿ ಶಿಸ್ತು, ಶ್ರದ್ಧೆ ಮೈಗೂಡಿಸಿಕೊಳ್ಳಲು ಕರೆ

Published:
Updated:

ಕುಂದಾಪುರ:ತಮ್ಮ ಹೆತ್ತವರು ತಮ್ಮ ಮೇಲೆ ಇರಿಸಿರುವ ಭವಿಷ್ಯದ ನಿರೀಕ್ಷೆಗಳನ್ನು ಅರಿತುಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ವಿದ್ಯಾರ್ಥಿ ಜೀವನದಲ್ಲಿ  ಉತ್ತಮ ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದು ಕೋಟ ಠಾಣಾಧಿಕಾರಿ ಅಶೋಕ್.ಪಿ ಹೇಳಿದರು.ಇಲ್ಲಿಗೆ ಸಮೀಪದ ತೆಕ್ಕಟ್ಟೆ ವಿಶ್ವ ವಿನಾಯಕ ಶಾಲೆಯಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಸಂಸತ್ ಉದ್ಘಾಟಿಸಿ ಅವರು ಮಾತನಾಡಿದರು.ವಿಜ್ಞಾನ ಹಾಗೂ ಆಧುನಿಕತೆಯ ವ್ಯಾಮೋಹಕ್ಕೆ ಇಂದಿನ ಯುವ ಜನಾಂಗ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಮುಗಿದು ಕಾಲೇಜು ಮೆಟ್ಟಿಲು ಏರಿದಾಗ ಅವರಲ್ಲಿ ಶಿಸ್ತಿನ ಗುಣಮಟ್ಟ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ ಎಂದರು.ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಣೆಯಾಗುತ್ತಿದ್ದು, ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಅಭ್ಯಾಸದ ಜೊತೆಯಲ್ಲಿ ಸಾಮಾಜಿಕ ಬದ್ಧತೆಯೂ ಅಗತ್ಯ ಎಂದರು.ಸಂಸ್ಥೆಯ ವಿವಿಧ ತರಗತಿಯ ವಿದ್ಯಾರ್ಥಿ ತಂಡದ ನಾಯಕರಿಗೆ ಬ್ಯಾಡ್ಜ್ ನೀಡುವ ಮೂಲಕ ಶಾಲಾ ವಿದ್ಯಾರ್ಥಿ ಸಂಸತ್‌ನ್ನು ರಚಿಸಲಾಯಿತು.ಸಂಸ್ಥೆಯ ಆಡಳಿತ ಮಂಡಳಿಯ ಆಡಳಿತ  ಟ್ರಸ್ಟಿ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು , ಆಡಳಿತಾಧಿಕಾರಿ  ಭಾಸ್ಕರ ಶೆಟ್ಟಿ , ಶಾಲಾ ಪ್ರಾಂಶುಪಾಲೆ ರಾಧಾಮಣಿ ನಾಯರ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry