ಗುರುವಾರ , ಜನವರಿ 23, 2020
20 °C

ಜೀವನಾನುಭವದಿಂದ ಸಾಹಿತ್ಯ ಮೂಡಿಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: `ಬರಹಗಾರರು ಜೀವನಾನುಭವ  ಪಡೆದು ಬಳಿಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು~ ಎಂದು ಹಿರಿಯ  ಸಾಹಿತಿ ಕೆ.ವಿ.ಕೃಷ್ಣಯ್ಯ ಹೇಳಿದರು.ಕುಂದಾಪುರದಲ್ಲಿನ ಸರ್ಕಾರಿ  ಪದವಿಪೂರ್ವ ಕಾಲೇಜಿನ  ರೋಟರಿ ಲಕ್ಷ್ಮಿ ನರಸಿಂಹ  ಕಲಾಮಂದಿರದಲ್ಲಿ ಭಾನುವಾರ  `ಕುಂದಪ್ರಭ~  ಸಂಸ್ಥೆ  ಆಶ್ರಯದಲ್ಲಿ  ನಡೆದ  ಬರಹಗಾರರ  ಸಮ್ಮೇಳನ~ ಉದ್ಘಾಟಿಸಿ ಅವರು  ಮಾತನಾಡಿದರು.`ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಲು, ವರ್ಚಸ್ಸು, ಸಂಪತ್ತುಗಳೆ ಬೇಕಿಲ್ಲ. ಉತ್ತಮ ಸಾಹಿತ್ಯ ಕೃತಿಗಳ ರಚನೆಯಿಂದಲೂ  ಜನಮನ್ನಣೆ ಹಾಗೂ ಕೀರ್ತಿ ಪಡೆಯಲು  ಸಾಧ್ಯ~ ಎಂದರು. ಮಂಗಳೂರು ಆಕಾಶವಾಣಿ ನಿಲಯ ನಿರ್ದೆಶಕ ವಸಂತ ಕುಮಾರ  ಪೆರ್ಲ ಮಾತನಾಡಿ, `ಕೈಬರಹರೂಪದ ಸಾಹಿತ್ಯಕ್ಕೆ 1550 ವರ್ಷಗಳ ಇತಿಹಾಸವಿದ್ದರೆ, ಆಧುನಿಕ  ಮುದ್ರಣ ಸಾಹಿತ್ಯಕ್ಕೆ ಕೇವಲ 200 ವರ್ಷಗಳ ಇತಿಹಾಸ ಮಾತ್ರ ಇದೆ. ಇದೀಗ ಬರವಣಿಗೆ ಸಾಹಿತ್ಯವನ್ನು ಉಳಿಸಲು ಒದ್ದಾಟ ನಡೆಸಬೇಕಾಗಿದೆ. ಮಾಧ್ಯಮ ಕ್ಷೇತ್ರಗಳು ಸೇರಿದಂತೆ ಬರವಣಿಗೆಯ ಸಾಹಿತ್ಯದ ಬಹುಪಾಲು ಕೀ ಬೋರ್ಡ್ ಮೇಲೆ ಕೈಯಾಡಿಸುವುದಕ್ಕೆ ಪ್ರಾಮುಖ್ಯ ಪಡೆದುಕೊಳ್ಳುತ್ತದೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ.ಎನ್.ಜಿ. ಪಟವರ್ಧನ್ ಮಾತನಾಡಿ, `ಅರ್ಥಪೂರ್ಣ ಸಮಾಜ ರಚನೆಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಎಂತಹ ಸಾಹಿತ್ಯ ರಚನೆಯಾಗಬೇಕು, ಎಂತಹ ಸಾಹಿತ್ಯ ಅಧ್ಯಯನ ಮಾಡಬೇಕು ಎನ್ನುವುದು  ಕೂಡ ಬಹುಮುಖ್ಯ~ ಎಂದರು.ರಾಜ್ಯೋತ್ಸವ  ಪ್ರಶಸ್ತಿ  ಪುರಸ್ಕೃತ  ನೇರಂಬಳ್ಳಿ ರಾಘವೇಂದ್ರ ರಾವ್ ಅವರನ್ನು  ಗೌರವಿಸಲಾಯಿತು. ಪ್ರೊ.ಎಂ.ಎಲ್ ಸಾಮಗ, ಕುಂದಪ್ರಭ  ಸಂಸ್ಥೆ  ಅಧ್ಯಕ್ಷ  ಯು.ಎಸ್ ಶೆಣೈ, ಕೋ.ಶಿವಾನಂದ ಕಾರಂತ್, ಉಪನ್ಯಾಸಕ ರಾಜೀವ್ ನಾಯ್ಕ, ನವಿಲೂರು ಪ್ರಕಾಶ್, ರಮಾನಂದ ಕಾಮತ್, ಎಚ್.ಸೋಮಶೇಖರ ಶೆಟ್ಟಿ, ಉಪನ್ಯಾಸಕ ವಿಶ್ವನಾಥ ಕರಬ ಇದ್ದರು.

ಪ್ರತಿಕ್ರಿಯಿಸಿ (+)