ಸೋಮವಾರ, ಜೂನ್ 21, 2021
27 °C

ಜೀವನ್ ವೃದ್ಧಿಗೆ ಎಲ್‌ಐಸಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ಜೀವ ವಿಮಾ ನಿಗಮವು ಹಲವು ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡ ಹೊಸ ವಿಮೆ ಯೋಜನೆ `ಜೀವನ್ ವೃದ್ಧಿ~ ಆರಂಭಿಸಿದೆ.ಒಂದು ಬಾರಿ ಮಾತ್ರ ವಿಮೆ ಕಂತು ಪಾವತಿಸುವ ಮತ್ತು ವಿಮೆ ಮೊತ್ತವು ಕಂತಿನ 5 ಪಟ್ಟುಗಳಷ್ಟು ಹೆಚ್ಚಿಗೆ ಇರುವ  ವಿಮೆ ಮತ್ತು ಲಾಭ ನೀಡುವ ಯೋಜನೆಯಾಗಿದೆ. ಸೀಮಿತ ಅವಧಿಗೆ ಮಾತ್ರ ಈ ಯೋಜನೆ ಲಭ್ಯ ಇದೆ. ಕನಿಷ್ಠ ಹೂಡಿಕೆ ಮೊತ್ತ ರೂ.30 ಸಾವಿರವಾಗಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. 8ರಿಂದ 50 ವಯೋಮಾನದವರು ಈ ಯೋಜನೆ ಖರೀದಿಸಲು ಅರ್ಹರು. ಪಾಲಿಸಿ ಅವಧಿ 10 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಕನಿಷ್ಠ ವಿಮೆ ಪರಿಹಾರ ಮೊತ್ತ ರೂ.1.50 ಲಕ್ಷವಾಗಿದೆ ಎಂದು `ಎಲ್‌ಐಸಿ~ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.