ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು

7

ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು

Published:
Updated:
ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು

ಮಡಿಕೇರಿ: ಉತ್ತಮ ಶಿಕ್ಷಣದಿಂದ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳ ಬಹುದು. ಮನುಷ್ಯನ ಪರಿವರ್ತನೆಗೆ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವ ವಾದುದು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.



ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಶೈಕ್ಷಣಿಕ ಸಮ್ಮೇಳನ ವನ್ನು  ಉದ್ಘಾಟಿಸಿ ಮಾತನಾಡಿದರು.



ಸಮಾಜದಲ್ಲಿ ಶಿಕ್ಷಣವು ಮನುಷ್ಯ ನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಪ್ರತಿ ವಿದ್ಯಾರ್ಥಿಯನ್ನು ತಿದ್ದುತಿಡುವ ಮೂಲಕ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಅವರು ಕರೆ ನೀಡಿದರು.



ಸರ್ಕಾರ ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಹಲವಾರು ಯೋಜನೆ ಗಳನ್ನು ರೂಪಿಸಿದ್ದು, ಇದನ್ನು ಸಫಲ ಗೊಳಿಸಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು ಎಂದರು.



ಕೊಡಗು ಜಿಲ್ಲೆಯು ಶೈಕ್ಷಣಿಕ ಅಭಿ ವೃದ್ಧಿಯತ್ತ ಸಾಗುತ್ತಿದೆಯಾದರೂ, ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿ ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.



ನಿವೃತ್ತ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿದ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಮಾತನಾಡಿ, ಇಂದು ಶಿಕ್ಷಕರು ಮಕ್ಕಳಲ್ಲಿ ಶಿಸ್ತು, ನೈತಿಕತೆ, ಚಾರಿತ್ರ್ಯ ಪಾಠ ಬೋಧಿಸಬೇಕು.



ಕಲುಷಿತ ಸಮಾಜವನ್ನು ಮತ್ತು ಅಡ್ಡ ದಾರಿ ಹಿಡಿದಿರುವ ಯುವಜನಾಂಗ ವನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.



ಪ್ರತಿ ಶಾಲೆಗಳು ಶೇಕಡಾ ವಾರು ಫಲಿತಾಂಶ ತೆಗೆದುಕೊಳ್ಳುವುದಕ್ಕಾ ಗಿಯೇ ಪ್ರತಿ ವಿದ್ಯಾರ್ಥಿಯಲ್ಲಿ ಅವರ ಮಾನಸಿಕ, ಶೈಕ್ಷಣಿಕವಾಗಿ ಅವರನ್ನು ಸನ್ನದ್ಧರಾಗಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಬೆಳೆಸಬೇಕು.



ಜಿ.ಪಂ. ವತಿಯಿಂದ ಅಗತ್ಯವಿರುವ ಶಾಲಾ ದುರಸ್ತಿ, ಕ್ರೀಡಾಂಗಣ ನಿರ್ಮಾ ಣಕ್ಕೆ ಆದ್ಯತೆ ಮೇಲೆ ಹಣ ನೀಡುವುದಾಗಿ ತಿಳಿಸಿದರು.



ಡಿಡಿಪಿಐ ಎನ್.ಎ. ರಾಮಸ್ವಾಮಿ ಮಾತನಾಡಿ, ಮುಖ್ಯ ಶಿಕ್ಷಕರು ಶಾಲೆ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಮಾತ್ರ ವಲ್ಲ, ಇದು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.



ಈ ತಿಂಗಳು 1ರಿಂದ 10 ಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.



ನಿವೃತ್ತಗೊಂಡ ಮುಖ್ಯ ಶಿಕ್ಷಕರಾದ ಕೊಡಗರಹಳ್ಳಿಯ ಸುಂಟಿಕೊಪ್ಪ ಕೆ. ಎಸ್. ಸಿದ್ದಲಿಂಗ ಸ್ವಾಮಿ, ಕಕ್ಕಬ್ಬೆ ಪ್ರೌಢಶಾಲೆಯ ವೇಣುಗೋಪಾಲ್, ಪೊನ್ನಪ್ಪ ಸಂತೆ ಪ್ರೌಢಶಾಲೆಯ ಬಿ.ಎನ್.  ಮಾಯಮ್ಮ, ವೀರಾಜಪೇಟೆ ಜಯ ಪ್ರಕಾಶ್ ಪ್ರೌಢಶಾಲೆಯ ಸಿ.ಜಿ. ಸುನಂದಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಇದೇ ವೇಳೆಯಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇ 100 ಫಲಿತಾಂಶ ಬಂದ ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.



ನಂಜರಾಯಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಲ್. ದೊಡ್ಡಸಿದ್ದಪ್ಪ ಸ್ವಾಗತಿಸಿದರು. ಬಲ್ಲಮಾವುಟಿ ನೇತಾಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಪಿ. ಕುಮಾರಸ್ವಾಮಿ ವಂದಿಸಿದರು. ಮದೆ ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಜೋಯಪ್ಪ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry