ಮಂಗಳವಾರ, ನವೆಂಬರ್ 19, 2019
28 °C

`ಜೀವವೈವಿಧ್ಯದ ಮೂಲಕ ಸಂಸ್ಕೃತಿ ರಕ್ಷಿಸಿ'

Published:
Updated:

ಶಿರಸಿ: `ಕಾಡು, ನೀರು, ಜೀವವೈವಿಧ್ಯ ಸಂರಕ್ಷಿಸುವ ಮೂಲಕ ನಮ್ಮ ಸಂಸ್ಕೃತಿ ಉಳಿವಿಗೆ ನಾವು ಕಾರಣರಾಗಬೇಕು' ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಆರ್.ಆರ್.ಹಂಚಿನಾಳ ಹೇಳಿದರು.ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಅರಣ್ಯ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಭದ್ರಾ ಸುಭದ್ರವಾದ ಹತ್ತು ವರ್ಷಗಳು' ಭದ್ರಾ ಹುಲಿ ಯೋಜನೆಯ ಯಶಸ್ಸಿನ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ನೀರಿನ ತುಟಾಗ್ರತೆಯಿಂದ ಅನೇಕ ಸಂಸ್ಕೃತಿಗಳು ಅಂತ್ಯ ಕಂಡಿವೆ. ಜೀವವೈವಿಧ್ಯ ತಾಣವಾಗಿರುವ ಅರಣ್ಯ ಮನುಷ್ಯನ ಬದುಕಿಗೆ ಆಧಾರವಾಗಿದೆ. ಹೀಗಾಗಿ ನೀರು ಹಾಗೂ ಕಾಡು ಸಮಾನ ಮಹತ್ವ ಹೊಂದಿದ್ದು, ಇವನ್ನು ಜತನದಿಂದ ರಕ್ಷಿಸಬೇಕಾದ ಹೊಣೆಗಾರಿಕೆ ಇದೆ' ಎಂದರು.ನಿವೃತ್ತ ಐಎಎಸ್ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡ ಮಾತನಾಡಿ, `ಪರಿಸರ ರಕ್ಷಣೆ ಕುರಿತಂತೆ ಜನಪ್ರತಿನಿಧಿಗಳು ವಿಶೇಷ ಆಸಕ್ತಿ ತೋರಬೇಕಾಗಿದೆ' ಎಂದರು.ಉಪಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಡಿ.ವಿ.ಗಿರೀಶ, ಡಾ.ಎನ್.ಸಾಂಬಕುಮಾರ, ಭದ್ರಾ ಪುನರ್ವಸತಿ ಹಳ್ಳಿಗಳಿಂದ ಆಗಮಿಸಿದ ರೈತ ಪ್ರತಿನಿಧಿ ಎಂ.ಸಿ. ಪ್ರಕಾಶ ಮಾತನಾಡಿದರು.ಕಾಲೇಜಿನ ಡೀನ್ ಡಾ. ಎಸ್.ಎಲ್.ಮಡಿವಾಳರ ಉಪಸ್ಥಿತರಿದ್ದರು.ಗುರುದತ್ತ ಹೆಗಡೆ ಸ್ವಾಗತಿಸಿದರು. ಹೇಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಜವರೇಗೌಡ ವಂದಿಸಿದರು.

ಪ್ರತಿಕ್ರಿಯಿಸಿ (+)