ಜೀ ಕನ್ನಡದಲ್ಲಿ ನಟರಾಜನಿಗೆ ನಮನ

7

ಜೀ ಕನ್ನಡದಲ್ಲಿ ನಟರಾಜನಿಗೆ ನಮನ

Published:
Updated:

ಶಿವರಾತ್ರಿಯ ಮರುದಿನ ನಟರಾಜನಿಗೆ ನಮನ. ಇಂಥದೊಂದು ವಿಶಿಷ್ಟ ಭರತನಾಟ್ಯ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಮಂಗಳವಾರ (ಫೆ.21) `ಯಾರಿಗುಂಟು ಯಾರಿಗಿಲ್ಲ~ ರಿಯಾಲಿಟಿ ಶೋನಲ್ಲಿ ಪ್ರಸಾರವಾಗಲಿದೆ.ನೃತ್ಯ ಕಲಾವಿದೆಯರಾದ ಶೋಭಾ ಎಂ. ಲೋಲನಾಥ್, ರಮ್ಯೋ ವೆಂಕಟೇಶ್, ದಿವ್ಯಾ ರಘುರಾಮ್ ಹಾಗೂ ಲತಾ ಎಸ್.ರಾವ್ ಅವರು ಭರತನಾಟ್ಯ ಪ್ರದರ್ಶನ ನೀಡುವ ಜೊತೆಗೆ `ಯಾರಿಗುಂಟು ಯಾರಿಗಿಲ್ಲ~ ಕಾರ್ಯಕ್ರಮದಲ್ಲಿ ಅನೇಕ ವಿನೋದದ ಆಟಗಳಲ್ಲಿಯೂ ಭಾಗವಹಿಸಲಿದ್ದಾರೆ.

 

ನಟರಾಜನ ಪ್ರತಿಮೆ ಎದುರು ನಡೆಯುವ ಈ ನೃತ್ಯ ಹಾಗೂ ಆಟಗಳ ಮೇಳವು ನೋಡುಗರ ಕಣ್ಣಿಗೆ ಸೊಬಗು ನೀಡುವುದಂತೂ ಖಚಿತ.  ರಾತ್ರಿ 9.00ರಿಂದ 10ರವರೆಗೆ  ಕಾರ್ಯಕ್ರಮ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry