ಮಂಗಳವಾರ, ಏಪ್ರಿಲ್ 13, 2021
23 °C

ಜುಂದಾಲ್ ಮುಂಬೈ ಪೊಲೀಸರ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೆಹಲಿಯಿಂದ ಕರೆತರಲಾದ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಎಂದು ಹೇಳಲಾದ ಅಬು ಜುಂದಾಲ್‌ನನ್ನು ಇಲ್ಲಿನ ಮುಖ್ಯ ಮೆಟ್ರೊಪಾಲಿನ್ ನ್ಯಾಯಾಲಯವು (ಸಿಎಂಎಂ) ಇದೇ 31ರವರೆಗೆ ಮುಂಬೈನ ಅಪರಾಧ ವಿಭಾಗದ ಪೊಲೀಸರ ವಶಕ್ಕೆ ಒಪ್ಪಿಸಿದೆ.ದೆಹಲಿ ಪೊಲೀರ ವಶದಲ್ಲಿದ್ದ ಜುಂದಾಲ್‌ನನ್ನು ದೆಹಲಿ ಮುಖ್ಯ ಮೆಟ್ರೊಪಾಲಿಟನ್ ನಾಯ್ಯಾಲಯವು ಶುಕ್ರವಾರವಷ್ಟೇ ಎಟಿಎಸ್‌ಗೆ ಒಪ್ಪಿಸಿ, ಮುಂಬೈಗೆ ಹೋದ ಕೂಡಲೇ ಅಲ್ಲಿನ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿತ್ತು. ಜೊತೆಗೆ ಯಾವ ಪ್ರಕರಣದಲ್ಲಿ ಮತ್ತು ಎಷ್ಟು ದಿನಗಳ ಕಾಲ ಆತನನ್ನು ವಶಕ್ಕೆ ನೀಡಬೇಕು ಎಂಬ ನಿರ್ಧಾರವನ್ನು ಮುಂಬೈ ನ್ಯಾಯಾಲಯದ ವಿವೇಚನೆಗೆ ಬಿಟ್ಟಿತ್ತು.26/11 ದಾಳಿ ಸೇರಿದಂತೆ 2006ರಲ್ಲಿ ಔರಂಗಾಬಾದ್‌ನಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರ, 2010ರಲ್ಲಿ ಪುಣೆಯಲ್ಲಿ ನಡೆದ ಜರ್ಮನ್ ಬೇಕರಿ ಸ್ಫೋಟ, ನಾಸಿಕ್ ಅಕಾಡೆಮಿ ಮೇಲೆ ದಾಳಿ ನಡೆಸಲು ಹೂಡಿದ್ದ ಸಂಚು ಪ್ರಕರಣಗಳಲ್ಲಿ ಜುಂದಾಲ್ ಕೈವಾಡ ಇರುವ ಕಾರಣ ಆತನನ್ನು ತನ್ನ ವಶಕ್ಕೆ ನೀಡಬೇಕು ಎಂದು ಎಟಿಎಸ್ ಕೋರಿತ್ತು.ಆದರೆ, ಸಿಎಂಎಂ ನ್ಯಾಯಾಧೀಶರಾದ ಶಿಂಧೆ ಅವರು ಜುಂದಾಲ್‌ನನ್ನು 26/11ರ ದಾಳಿಗೆ ಸಂಬಂಧಿಸಿದಂತೆ ಮುಂಬೈನ ಅಪರಾಧ ವಿಭಾಗದ ಪೊಲೀಸರ ವಶಕ್ಕೆ ಇದೇ 31ರವರೆಗೆ ಒಪ್ಪಿಸಿದರು. ಇದಕ್ಕೆ ಎಟಿಎಸ್ ಆಕ್ಷೇಪ ವ್ಯಕ್ತಪಡಿಸಲಿಲ್ಲ.ನಂತರ ಜುಂದಾಲ್‌ನನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೂ ಹಾಜರು ಪಡಿಸಲಾಯಿತು. ಈ ನ್ಯಾಯಾಲಯ ಕೂಡ ಆರೋಪಿಯನ್ನು ಇದೇ 31ರವರೆಗೆ ಪೊಲೀಸ್‌ರ ವಶಕ್ಕೆ ನೀಡಿತು.

26/11ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧಿಸುತ್ತಿರುವ ಎರಡನೇ ವ್ಯಕ್ತಿ ಜುಂದಾಲ್. ಈ ಮೊದಲು ದಾಳಿಕೋರರಲ್ಲಿ ಒಬ್ಬನಾದ ಅಜ್ಮಲ್ ಕಸಾಬ್ ದಾಳಿಯ ಸಂದರ್ಭದಲ್ಲೇ ಸೆರೆ ಸಿಕ್ಕಿದ್ದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.