ಬುಧವಾರ, ಮೇ 12, 2021
18 °C

ಜುಡೋ: ಸಹ್ಯಾದ್ರಿ ಕಾಲೇಜು ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಡೋ: ಸಹ್ಯಾದ್ರಿ ಕಾಲೇಜು ಚಾಂಪಿಯನ್

ಶಿವಮೊಗ್ಗ: ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಈಚೆಗೆ ನಡೆದ ಕುವೆಂಪು ವಿಶ್ವವಿದ್ಯಾನಿಲಯದ ಅಂತರಕಾಲೇಜು ಜುಡೋ ಸ್ಪರ್ಧೆಯಲ್ಲಿ ಪುರುಷರ ತಂಡ ಚಾಂಪಿಯನ್‌ಶಿಪ್ ಪಡೆಯಿತು.ಅಲ್ಲದೇ ಸರ್ಕಾರಿ ಪ್ರಥಮದರ್ಜೆ ಕಾಲೇಜು ಶಿಕಾರಿಪುರ ಆಶ್ರಯದಲ್ಲಿ ನಡೆದ ಪುರುಷ ಮತ್ತು ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಸಹ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ತಂಡ ಚಾಂಪಿಯನ್‌ಶಿಪ್ ಗಳಿಸಿತು. ಕಾಲೇಜಿನ ಉಪ ಕುಲಸಚಿವ ಎ.ಜಿ. ಮಲ್ಲಪ್ಪ, ಕ್ರೀಡಾ ಸಂಚಾಲಕ  ಪ್ರೊ.ಪುಟ್ಟಪ್ಪ, ಪ್ರಾಚಾರ್ಯ ಡಾ.ಮಹಾದೇವಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಎ. ನಾರಾಯಣ ರಾವ್ ಹಾಗೂ ಸಿಬ್ಬಂದಿ ಸ್ಪರ್ಧಾ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.