ಸೋಮವಾರ, ಜೂನ್ 21, 2021
30 °C

ಜುಪಿಟರ್ಸ್ ಆಟಗಾರರ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಜುಪಿಟರ್ಸ್ ಫುಟ್‌ಬಾಲ್ ಕ್ಲಬ್ ತಂಡದ ಕೆಲ ಆಟಗಾರರು ಹಾಗೂ ಕಾರ್ಯದರ್ಶಿ ವಿರುದ್ಧ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಶಿಸ್ತು ಕ್ರಮಕೈಗೊಂಡಿದೆ.`ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಕಿಕ್ಕರ್ಸ್ ಎದುರಿನ ಪಂದ್ಯದ ವೇಳೆ ಜುಪಿಟರ್ಸ್ ತಂಡದ ಕೆಲ ಆಟಗಾರರು ರೆಫರಿ ಆ್ಯಂಡ್ರ್ಯೂ ಜೊತೆ ಅನುಚಿತ ವರ್ತನೆ ತೋರಿದ್ದರು. ಅಷ್ಟು ಮಾತ್ರವಲ್ಲದೇ, ರೆಫರಿ ಮೇಲೆ ಕೈಮಾಡಿದ್ದರು. ಜುಪಿಟರ್ಸ್ ತಂಡದ ಕಾರ್ಯದರ್ಶಿ ಕೂಡ ರೆಫರಿ ನಿರ್ಧಾರವನ್ನು ಪ್ರಶ್ನಿಸಿದ್ದರು~ ಎಂದು ಬಿಡಿಎಫ್‌ಎ ತಿಳಿಸಿದೆ.ಹಾಗಾಗಿ ಬಿಡಿಎಫ್‌ಎ ಶಿಸ್ತು ಹಾಗೂ ವ್ಯವಸ್ಥಾಪಕ ಸಮಿತಿ ಈ ತಂಡದ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. `ಜುಪಿಟರ್ಸ್ ತಂಡದ ಎಂ.ವಿನೋದ್, ರಾಜೇಶ್, ವಿ.ಕೆ.ಹರೀಶ್, ಕೋಚ್-ಆಟಗಾರ ಮಣಿಮಾರನ್ ಅವರನ್ನು ಮೂರು ವರ್ಷಗಳ ಅಮಾನತುಗೊಳಿಸಲಾಗಿದೆ~ ಎಂದು ಬಿಡಿಎಫ್‌ಎ ಕಾರ್ಯದರ್ಶಿ ಎಸ್.ಟಿ.ಭೂಪಾಲ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.