ಭಾನುವಾರ, ಮೇ 16, 2021
23 °C

`ಜುಲೈನಲ್ಲಿ ಭೂಮಾಪನ ಯೋಜನೆ ಜಾರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಆತಗೂರು ಹೋಬಳಿ ವ್ಯಾಪ್ತಿಯಲ್ಲಿನ ಪುನರ್ ಭೂಮಾಪನ(ರೀ ಸರ್ವೇ) ಕಾರ್ಯದಲ್ಲಿನ ಗೊಂದಲಗಳ ನಿವಾರಣೆಗಾಗಿ ಜುಲೈ ತಿಂಗಳಿನಲ್ಲಿ ವಿಶೇಷ ಭೂಮಾಪನ ಕಾರ್ಯಕ್ರಮ ಆಯೋಜಿಸುವುದಾಗಿ ಶಾಸಕ  ಡಿ.ಸಿ. ತಮ್ಮಣ್ಣ ತಿಳಿಸಿದರು.ಕೆಸ್ತೂರು ಗ್ರಾಮದಲ್ಲಿ ಶನಿವಾರ ಅಟಲ್‌ಜೀ ಜನಸ್ನೇಹಿ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದರು. ಇದಲ್ಲದೇ ಖಾತಾ ಆಂದೋಲನ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದ್ದು, ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳ ನಿವಾರಣೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು.ಮುತ್ತುರಾಯನಕೆರೆ ಪಿಕಪ್‌ನಾಲೆ ನಿರ್ಮಾಣದಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಇನ್ನು ಸಿಕ್ಕಿಲ್ಲ. ಸೂಕ್ತ ಸರ್ವೆ ನಡೆಸಿ ರೈತರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ಧನ ಒದಗಿಸಲು    ತಹಶೀಲ್ದಾರ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಅವರು ಸೂಚನೆ ನೀಡಿದರು.ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿದ ಕೆಸ್ತೂರಿನಲ್ಲಿ ಅಟಲ್‌ಜೀ ಜನಸ್ನೇಹಿ ಉಪಕೇಂದ್ರ ತೆರೆಯುವ ಮೂಲಕ 36 ಸೇವೆಗಳು ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೇ ಸಕಾಲದಲ್ಲಿ ದೊರಕಲಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ರವಿ, ತಾ.ಪಂ.ಸದಸ್ಯ ನಾರಾಯಣಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಯಶೋದಮ್ಮ ರಾಮಣ್ಣ, ಸದಸ್ಯರಾದ ಚಂದ್ರಹಾಸ್, ಜಗದೀಶ್, ಆನಂದ್, ರಾಮಚಂದ್ರು, ಮುಖಂಡರಾದ ಕೆ.ದಾಸೇಗೌಡ,   ಹೂತಕೆರೆ ದಿನೇಶ್, ಬಿಳಿಯಪ್ಪ, ಕೆ.ಟಿ. ಸುರೇಶ್, ರಾಜೇಶ್, ರಮೇಶ್, ಎ.ಶಂಕರ್,   ಚಾಕನಕೆರೆ ಕುಮಾರ್, ಸತೀಶ್, ರಂಗಸ್ವಾಮಣ್ಣ,     ಗ್ರೇಡ್ 2  ತಹಶೀಲ್ದಾರ್ ರಾಮಪ್ಪ   ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.