ಶುಕ್ರವಾರ, ಮೇ 27, 2022
22 °C

ಜುಲೈ 1ರಿಂದ ಸೋಲಾಪುರ-ಬೆಂಗಳೂರು ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಲೈ 1ರಿಂದ ಸೋಲಾಪುರ-ಬೆಂಗಳೂರು ರೈಲು ಸಂಚಾರ

ಗುಲ್ಬರ್ಗ: `ಜುಲೈ 1ರಿಂದ ಹೊಸ ಸೋಲಾಪುರ-ಬೆಂಗಳೂರು ರೈಲನ್ನು ಗುಲ್ಬರ್ಗ ಮೂಲಕ ಪ್ರಾರಂಭಿಸಲಾಗುವುದು ಎಂದು  ರೈಲ್ವೆಯ ಗುಲ್ಬರ್ಗ ವಿಭಾಗೀಯ ಮ್ಯಾನೇಜರ್ ಭರವಸೆ ನೀಡಿದ್ದಾರೆ~ ಎಂದು ಕರ್ನಾಟಕ ಯುವಜನ ಒಕ್ಕೂಟದ (ಕೆವೈಎಫ್) ಗುಲ್ಬರ್ಗ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದ ಸೋಲಾಪುರ-ಬೆಂಗಳೂರು ರೈಲನ್ನು ಶೀಘ್ರ ಪ್ರಾರಂಭಿಸಬೇಕು, ತತ್ಕಾಲ್ ಟಿಕೆಟ್ ಕಾಳಸಂತೆ ಮಾರಾಟ ತಡೆಯಬೇಕು, ಪ್ಲಾಟ್‌ಫಾರಂ ಟಿಕೆಟ್ ದರ ರೂ. 5ರಿಂದ 2ಕ್ಕೆ ಇಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು  ಕರ್ನಾಟಕ ಯುವಜನ ಒಕ್ಕೂಟ (ಕೆವೈಎಫ್) ಗುಲ್ಬರ್ಗ ಜಿಲ್ಲಾ ಘಟಕದ ಪ್ರಮುಖರು  ಈಚೆಗೆ ರೈಲ್ವೆ ಗುಲ್ಬರ್ಗ ವಿಭಾಗೀಯ ಮ್ಯಾನೇಜರ್ ಅವರಿಗೆ ಸಲ್ಲಿಸಿದ್ದರು.ಸಾವಿರಾರು ಪ್ರಯಾಣಿಕರು ಗುಲ್ಬರ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಈಗ 2 ರೈಲುಗಳಷ್ಟೇ ಸಂಚರಿಸುತ್ತಿದ್ದು, ಇದರಿಂದ ಅನಾನುಕೂಲತೆ ಹೆಚ್ಚಿದೆ. ಹಾಗಾಗಿ ಹೊಸ ಸೋಲಾಪುರ-ಬೆಂಗಳೂರು ರೈಲು ಆರಂಭಿಸಬೇಕು. ತತ್ಕಾಲ ಟಿಕೆಟ್ ಏಜೆಂಟರ ಮೂಲಕ ರೂ. 400-500 ವರೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ. ಪ್ಲಾಟ್‌ಫಾರಂ ಟಿಕೆಟ್ ದರ ಈಗ ರೂ. 5 ಇದ್ದು, ಇದನ್ನು 2 ರೂಪಾಯಿಗಳಿಗೆ ಇಳಿಸಬೇಕು ಎಂದೂ ಮನವಿಯಲ್ಲಿ ವಿನಂತಿಸಲಾಗಿದೆ.ನಿಯೋಗದಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಅನಂತ ಜಿ. ಗುಡಿ, ಕಾರ್ಯದರ್ಶಿ ಜಗನ್ನಾಥ ಮಂಠಾಳೆ, ಗೌರವಾಧ್ಯಕ್ಷ ಭೀಮರಾವ ಜೀರಗಿ, ಉಪಾಧ್ಯಕ್ಷ ಮಹಾಂತೇಶ ಸಂಗೋಳಿ, ಪಾಲಿಕೆ ಸದಸ್ಯ ಕಲ್ಯಾಣ ರಾವ ಪಾಟೀಲ, ವಿನೋದ ಜನೆವರಿ, ಶ್ರೀಕಾಂತ ತೆಲ್ಲೂರ, ಶರಣ ಬಸಪ್ಪ ಜಾಪೂರ, ನಾಗಣ್ಣ ಶೀಲವಂತ, ಸಿದ್ದು ಪಡಶೇಟಿ, ಸುರೇಶ ಗ್ಹವಾಲ ನಿಯೋಗದಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.