ಜುಲೈ 19ಕ್ಕೆ ರಾಷ್ಟ್ರಪತಿ ಚುನಾವಣೆ, 22ಕ್ಕೆ ಮತ ಎಣಿಕೆ

7

ಜುಲೈ 19ಕ್ಕೆ ರಾಷ್ಟ್ರಪತಿ ಚುನಾವಣೆ, 22ಕ್ಕೆ ಮತ ಎಣಿಕೆ

Published:
Updated:
ಜುಲೈ 19ಕ್ಕೆ ರಾಷ್ಟ್ರಪತಿ ಚುನಾವಣೆ, 22ಕ್ಕೆ ಮತ ಎಣಿಕೆ

ನವದೆಹಲಿ (ಪಿಟಿಐ): ಮುಂದಿನ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 19ರಂದು ಚುನಾವಣೆ ನಡೆಯಲಿದ್ದು, ನೂತನ ರಾಷ್ಟ್ರಪತಿ ಯಾರೆಂಬುದು ಜುಲೈ 22ರಂದು ಮತಗಳ ಎಣಿಕೆಯೊಂದಿಗೆ ಬಹಿರಂಗಗೊಳ್ಳಲಿದೆ. ಜುಲೈ 24ರಂದು ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುವುದು.ಚುನಾವಣಾ ವೇಳಾಪಟ್ಟಿಯನ್ನು ಮಂಗಳವಾರ ಇಲ್ಲಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರು ಚುನಾವಣೆ ಸಂಬಂಧಿತ ಪ್ರಕಟಣೆಯನ್ನು ಜೂನ್ 16ರಂದು ಹೊರಡಿಸಲಾಗುವುದ ಎಂದು ಹೇಳಿದರು.ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 30ರಂದು ಕೊನೆಯ ದಿನವಾಗಿದ್ದು, ಜುಲೈ 12ರಂದು ನಾಮಪತ್ರ ಪರಿಶೀಲನೆ ನಡೆಯುವುದು. ನಾಮಪತ್ರ ವಾಪಸಾತಿಗೆ ಕೊನೆಯ ದಿನ ಜುಲೈ 4.ಮತದಾನ ಜುಲೈ 19ರಂದು ನಡೆಯಲಿದ್ದು ಮತಗಳ ಎಣಿಕೆಯು ಜುಲೈ 22ರಂದು ನಡೆಯುವುದು ಎಂದು ಸಂಪತ್ ಅವರು ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ರಾಷ್ಟ್ರಪತಿ ಚುನಾವಣೆಯಲ್ಲಿ 776 ಮಂದಿ ಸಂಸತ್ ಸದಸ್ಯರು, ದೆಹಲಿ ಮತ್ತು ಪುದುಚೆರಿಯ ಸದಸ್ಯರೂ ಸೇರಿದಂತೆ 4120 ಮಂದಿ ಶಾಸನಸಭೆಗಳ ಸದಸ್ಯರು ಸೇರಿದಂತೆ 4898 ಮಂದಿ ಮತ ಚಲಾಯಿಸುವರು.ಒಟ್ಟು ಮತಮೌಲ್ಯ 10,98,882 ಆಗಿದ್ದು ಇದರಲ್ಲಿ ಶಾಸಕರ ಮತಗಳ ಮೌಲ್ಯ 5,49,474 ಹಾಗೂ ಸಂಸತ್ ಸದಸ್ಯರ ಮತಮೌಲ್ಯ 5,49.408. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳ ನಾಮನಿರ್ದೇಶಿತ ಸದಸ್ಯರು ಮತದಾನಕ್ಕೆ ಅರ್ಹರಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry