ಶುಕ್ರವಾರ, ನವೆಂಬರ್ 22, 2019
26 °C

ಜೂಡೊ: ಅನಿತಾ ಚಾನುಗೆ ಕಂಚು

Published:
Updated:

ನವದೆಹಲಿ (ಪಿಟಿಐ): ಭಾರತದ ಅಂಗೋಮ್ ಅನಿತಾ ಚಾನು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಹಿರಿಯರ ಏಷ್ಯನ್ ಜೂಡೊ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ ಕಂಚಿನ ಪದಕ ಗೆದ್ದುಕೊಂಡರು. ಅವರು ಕೊರಿಯಾ, ಉಜ್ಬೆಕಿಸ್ತಾನ ಮತ್ತು ಕಜಕಸ್ತಾನದ ಪ್ರತಿಸ್ಪರ್ಧಿಗಳನ್ನು ಸೋಲಿಸಿದರು.ಅರ್ಜುನ ಪ್ರಶಸ್ತಿ ವಿಜೇತೆ ಅನಿತಾ ಚಾನು, ಕೆಲವು ವರ್ಷಗಳ ಬಳಿಕ ಮತ್ತೆ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 2003ರಲ್ಲಿ ಕೊರಿಯಾದಲ್ಲಿ ಆಯೋಜಿಸಲಾಗಿದ್ದ ಏಷ್ಯನ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು.

ಪ್ರತಿಕ್ರಿಯಿಸಿ (+)