ಶನಿವಾರ, ಮಾರ್ಚ್ 6, 2021
32 °C

ಜೂಡೊ; ಹೊರಬಿದ್ದ ಭಾರತದ ಅವತಾರ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂಡೊ; ಹೊರಬಿದ್ದ ಭಾರತದ ಅವತಾರ್ ಸಿಂಗ್

ರಿಯೊ ಡಿ ಜನೈರೊ (ಪಿಟಿಐ): ಜೂಡೊ ಸ್ಪರ್ಧೆಯಲ್ಲಿ ಭಾರತದ ಭರವಸೆ ಎನಿಸಿದ್ದ  ಅವತಾರ್‌ ಸಿಂಗ್‌ ಅವರು ಒಲಿಂಪಿಕ್ಸ್‌ ಪದಕದ ಕನಸು ಕಮರಿದೆ.

ಬುಧವಾರ ನಡೆದ ಪುರುಷರ 90 ಕೆ.ಜಿ. ವಿಭಾಗದ ಎಲಿಮಿನೇಷನ್‌ ಪಂದ್ಯ ದಲ್ಲಿ ಅವತಾರ್‌ ಅವರು ನಿರಾಶ್ರಿತರ ತಂಡದ ಮಿಸೆಂಗಾ ಪೊಪೊಲೆ  ವಿರುದ್ಧ ಸೋತರು.ಈ ವರ್ಷದ ಆರಂಭದಲ್ಲಿ ಗುವಾಹಟಿಯಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಪಂಜಾಬ್‌ನ ಅವತಾರ್‌ ಅವರು ಪೊಪೊಲೆ ವಿರುದ್ಧ ಆಕ್ರಮಣಕಾರಿ ಯಾಗಿ ಆಡಲಿಲ್ಲ. 24 ವರ್ಷದ ಪಂಜಾಬ್‌ನ ಜೂಡೊಕ ಅವರನ್ನು ಹಲವು ಬಾರಿ ನೆಲಕ್ಕುರುಳಿಸಿದ ಪೊಪೊಲ ಸತತವಾಗಿ ಪಾಯಿಂಟ್ಸ್‌ ಗಳಿಸಿ ಸುಲಭವಾಗಿ ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.