ಜೂನಿಯರ್‌ ಕ್ರಿಕೆಟ್‌ ತಂಡಕ್ಕೆ ಜೋಲ್‌ ಸಾರಥ್ಯ

7

ಜೂನಿಯರ್‌ ಕ್ರಿಕೆಟ್‌ ತಂಡಕ್ಕೆ ಜೋಲ್‌ ಸಾರಥ್ಯ

Published:
Updated:

ನವದೆಹಲಿ (ಪಿಟಿಐ): ವಿಜಯ್‌ ಜೋಲ್‌ ಅವರು ವಿಶಾಖಪಟ್ಟಣದಲ್ಲಿ ಸೆಪ್ಟೆಂಬರ್‌ 23ರಂದು ಆರಂಭವಾಗ­ಲಿರುವ ಚತುಷ್ಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡವನ್ನು ಮುನ್ನಡೆಸಲಿದ್ದಾರೆ.ಈ ಸರಣಿಯಲ್ಲಿ ಭಾರತವಲ್ಲದೇ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಪಾಲ್ಗೊಳ್ಳಲಿವೆ. ಅಕ್ಟೋಬರ್‌ 14ರಂದು ಕೊನೆಗೊಳ್ಳ­ಲಿರುವ ಈ ಸರಣಿಯಲ್ಲಿ ಒಟ್ಟು 14 ಪಂದ್ಯಗಳು ನಡೆಯಲಿವೆ. ಡಾ.ವೈಎಸ್‌ಆರ್‌ ಸಿಎ–ವಿಡಿಸಿಎ ಹಾಗೂ ಪೋರ್ಟ್‌ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.ಮೊದಲ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ಮುಖಾಮುಖಿಯಾಗಲಿವೆ. 25ರಂದು ದಕ್ಷಿಣ ಆಫ್ರಿಕಾ ಎದುರು ಹಾಗೂ 27ರಂದು ಆಸ್ಟ್ರೇಲಿಯಾ ಎದುರು ಜೋಲ್‌ ಬಳಗದವರು ಪೈಪೋಟಿ ನಡೆಸಲಿದ್ದಾರೆ.ಭಾರತ ತಂಡ ಇಂತಿದೆ: ವಿಜಯ್‌ ಜೋಲ್‌ (ನಾಯಕ), ಅಖಿಲ್‌ ಹೆರ್ವಾಡ್ಕರ್, ರಿಕಿ ಭುಯಿ, ಸರ್ಫರಾಜ್‌ ಖಾನ್, ದೀಪಕ್‌ ಹೂಡಾ, ಶ್ರೇಯಸ್‌ ಐಯರ್‌, ಶುಭಮ್‌ ಖಾಜುರಿಯಾ, ಅಂಕುಶ್‌ ಬೇನ್ಸ್‌, ಅತುಲ್‌ ಸಿಂಗ್‌, ಸಿ.ವಿ.ಮಿಲಿಂದ್‌, ಆತೀತ್‌ ಸೇತ್‌, ಅಭಿಮನ್ಯು ಲಂಬಾ, ಕುಲದೀಪ್‌ ಯಾದವ್‌, ಅಮಿರ್‌ ಗಾನಿ ಹಾಗೂ ಜಗದೀಶ್‌ ಜೋಪ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry