ಶುಕ್ರವಾರ, ನವೆಂಬರ್ 15, 2019
22 °C

ಜೂನಿಯರ್ ಹಾಕಿ ತಂಡಕ್ಕೆ ಗ್ರೆಗ್ ಕ್ಲಾರ್ಕ್ ಕೋಚ್

Published:
Updated:

ನವದೆಹಲಿ (ಪಿಟಿಐ): ದಕ್ಷಿಣ ಆಫ್ರಿಕಾದ ಮಾಜಿ ಒಲಿಂಪಿಯನ್ ಗ್ರೆಗ್ ಕ್ಲಾರ್ಕ್, ಭಾರತ ಪುರುಷರ ಜೂನಿಯರ್ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ಭಾನುವಾರ ನೇಮಕಗೊಂಡರು. ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಂಡಕ್ಕೆ ತರಬೇತಿ ನೀಡಲಿದ್ದಾರೆ.ಗ್ರೆಗ್ ಕ್ಲಾರ್ಕ್ ಇತ್ತೀಚೆಗೆ ಮುಕ್ತಾಯವಾದ ಹಾಕಿ ಇಂಡಿಯಾ ಲೀಗ್‌ನ (ಎಚ್‌ಐಎಲ್) ಚಾಂಪಿಯನ್ ರಾಂಚಿ ರಿನೋಸ್ ತಂಡದ ತರಬೇತುದಾರರಾಗಿದ್ದರು. 42 ವರ್ಷ ವಯಸ್ಸಿನ ಕ್ಲಾರ್ಕ್, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಕ್ಕೆ ಏಳು ವರ್ಷಗಳ ಕಾಲ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.ಕ್ಲಾರ್ಕ್ 250ಕ್ಕೂ ಅಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪ್ರತಿಕ್ರಿಯಿಸಿ (+)