ಸೋಮವಾರ, ಮಾರ್ಚ್ 8, 2021
29 °C
ಮಿನುಗು ಮಿಂಚು

ಜೂನೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನೊ

ಜೂನೊ ಎಂದರೇನು?

ನಾಸಾ ವಿನ್ಯಾಸ ಮಾಡಿದ ಬಾಹ್ಯಾಕಾಶ ಸಂಶೋಧನಾ ವ್ಯವಸ್ಥೆಗೆ ‘ಜೂನೊ’ ಎಂದು ಹೆಸರು. ನಮ್ಮ ಸೌರಮಂಡಲದ ದೊಡ್ಡ ಗ್ರಹವನ್ನು ಅಧ್ಯಯನ ಮಾಡುವುದು ಇದರ ಉದ್ದೇಶ. ಮೂರು ಪ್ಯಾನಲ್‌ಗಳಿರುವ ಈ ಸಂಶೋಧನಾ ಯಂತ್ರವು ಸೌರಶಕ್ತಿಯಿಂದಲೇ ಚಾಲನೆಯಾಗುತ್ತದೆ.

18696 ಸೌರಕೋಶಗಳನ್ನು ಅದಕ್ಕೆ ಅಳವಡಿಸಲಾಗಿದ್ದು, ಗುರು ಗ್ರಹದತ್ತ ಹೊಮ್ಮುವ ಸೂರ್ಯನ ಶಕ್ತಿಯನ್ನು ಅದು ಗ್ರಹಿಸಬಲ್ಲದು. ಒಂದು ವೈಜ್ಞಾನಿಕ ಉಪಕರಣಗಳನ್ನು ಜೂನೊಗೆ ಅಳವಡಿಸಲಾಗಿದೆ. ವಿಕಿರಣದಿಂದ ರಕ್ಷಿಸಲು ಟೈಟಾನಿಯಂನ ದಪ್ಪ ಕವಚವನ್ನು ಅದಕ್ಕೆ ಅಳವಡಿಸಲಾಗಿದೆ.ಗುರು ಗ್ರಹವನ್ನು ಅಧ್ಯಯನ ಮಾಡುವುದು ಯಾಕೆ ಮುಖ್ಯ?

ಸೌರಮಂಡಲದಲ್ಲಿ ಮೊದಲು ರೂಪಿತವಾದ ಗ್ರಹ ಗುರು ಎಂದು ವಿಜ್ಞಾನಿಗಳು ನಂಬಿದ್ದಾರೆ. ಅದನ್ನು ಕುರಿತ ಅಧ್ಯಯನದಿಂದ ಸೌರಮಂಡಲ ರಚಿತವಾದ ಸಂಗತಿಗಳ ಕುರಿತು ಅನೇಕ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆ ಇದೆ.ಗುರು ಗ್ರಹ ತಲುಪಲು ಜೂನೊಗೆ ಎಷ್ಟು ಸಮಯ ಬೇಕಾಯಿತು?

2011ರ ಆಗಸ್ಟ್ 5ರಂದು ಜೂನೊ ಉಡಾವಣೆ ಆಗಿತ್ತು. ಪ್ರತಿ ಗಂಟೆಗೆ 1.65 ಲಕ್ಷ ಮೈಲು ವೇಗದಲ್ಲಿ 180 ಕೋಟಿ ಮೈಲುಗಳಷ್ಟು ದೂರ ಸಾಗಿ, ಅದು 2016ರ ಜುಲೈನಲ್ಲಿ ಗುರು ಗ್ರಹವನ್ನು ತಲುಪಿತು.ಅದರ ಗುರಿಗಳು ಏನು?

ಗುರು ಗ್ರಹದ ವಾತಾವರಣ, ಅಲ್ಲಿನ ಕಾಂತೀಯ ಶಕ್ತಿ ಹಾಗೂ ಗುರುತ್ವಾಕರ್ಷಣ ಶಕ್ತಿಯನ್ನು ತಿಳಿಯುವುದು ಉದ್ದೇಶ. ಗುರು ಗ್ರಹದಲ್ಲಿ ನೀರು ಇದೆಯೇ ಎನ್ನುವುದನ್ನೂ ಅದು ಪತ್ತೆಹಚ್ಚಲಿದೆ. ಇದುವರೆಗೆ 1,300 ಫೋಟೊಗಳನ್ನು ಹಾಗೂ ಒಂದಿಷ್ಟು ಧ್ವನಿ ಒಳಗೊಂಡ ಫೈಲ್‌ಗಳನ್ನು ಅದು ಕಳುಹಿಸಿದೆ.ಜೂನೊ ಎಷ್ಟು ಕಾಲಾವಧಿ ಕಾರ್ಯನಿರ್ವಹಿಸಲಿದೆ?

20 ತಿಂಗಳ ಅವಧಿಯಲ್ಲಿ 37 ಬಾರಿ ಗುರು ಗ್ರಹವನ್ನು ಅದು ಸುತ್ತುಹಾಕಲಿದೆ. 2018ರ ಫೆಬ್ರುವರಿಯಲ್ಲಿ ಅದರ ಅಧ್ಯಯನಾವಧಿ ಮುಗಿಯಲಿದೆ. ಗುರು ಗ್ರಹದ ವಾತಾವರಣದತ್ತ ಸಾಗಿ, ಕೊನೆಗೆ ಅದು ಸುಟ್ಟು ಕರಗಲಿದೆ.ಯಾಕೆ ಜೂನೊ ಎಂಬ ಹೆಸರು?

ಗುರು ಗ್ರಹಕ್ಕೆ ಜೂಪಿಟರ್ ಎಂಬ ಹೆಸರು. ರೋಮನ್ ಪುರಾಣದ ಪ್ರಕಾರ ಜೂಪಿಟರ್ ಪತ್ನಿಯ ಹೆಸರು ಜೂನೊ. ಗುರುವಿನ ವಾತಾವರಣದಲ್ಲಿ ಇದ್ದ ಮೋಡಗಳನ್ನು ಭೇದಿಸಿ ಸಾಗಬಲ್ಲ ಶಕ್ತಿ ಜೂನೊಗೆ ಇತ್ತು. ಅದಕ್ಕೇ ಈ ಹೆಸರನ್ನು ಇಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.