ಶನಿವಾರ, ನವೆಂಬರ್ 16, 2019
21 °C

ಜೂನ್‌ಗೆ `ಆವಿಷ್ಕಾರ ನಿಧಿ' ಅಸ್ತಿತ್ವಕ್ಕೆ

Published:
Updated:

ನವದೆಹಲಿ(ಪಿಟಿಐ): ಪ್ರಸ್ತಾವಿತ ರೂ 5,500 ಕೋಟಿ ಮೊತ್ತದ `ಸಮಗ್ರ ಆವಿಷ್ಕಾರ ನಿಧಿ' ಜೂನ್ ವೇಳೆಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರದ `ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ' (ಎಂಎಸ್‌ಎಂಇ) ಸಚಿವಾಲಯ ಹೇಳಿದೆ.ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು `ಆವಿಷ್ಕಾರ ನಿಧಿ' ಮೂಲಕ ಪ್ರೋತ್ಸಾಹಿಸಲಾಗುವುದು. ಇಂತಹ ಘಟಕಗಳಿಗೆ ಬೇಕಿರುವ ಆರ್ಥಿಕ ನೆರವು ನೀಡಲಾಗುವುದು. ಮುಖ್ಯವಾಗಿ ಉದ್ಯೋಗಾವಕಾಶ ಸೃಷ್ಟಿ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಪ್ರಗತಿ ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವವನ್ನು ಇನ್ನೆರಡು ದಿನಗಳಲ್ಲಿ ಸಂಪುಟಕ್ಕೆ ಕಳುಹಿಸಲಾಗುತ್ತದೆ ಎಂದು `ಎಂಎಸ್‌ಎಂಇ' ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ರಾಷ್ಟ್ರೀಯ ಆವಿಷ್ಕಾರ ಮಂಡಳಿಯ ಸಹಭಾಗಿತ್ವದಲ್ಲಿ `ಎಂಎಸ್‌ಎಂಇ' ಸಚಿವಾಲಯ ಈ ವಿಶೇಷ ನಿಧಿಯನ್ನು ಸ್ಥಾಪಿಸಲಿದೆ. ಇದಕ್ಕೆ ಬೇಕಿರುವ ಶೇ  20ರಷ್ಟು ಮೂಲಧನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಉಳಿದ ಮೊತ್ತವನ್ನು ಬ್ಯಾಂಕುಗಳು, ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ.

ಸದ್ಯ ದೇಶದಲ್ಲಿ 2.60 ಕೋಟಿ  `ಎಂಎಸ್‌ಎಂಇ' ಘಟಕಗಳಿದ್ದು 6 ಕೋಟಿ ಜನರಿಗೆ ಉದ್ಯೋಗ ಒದಗಿಸಿವೆ.

ಪ್ರತಿಕ್ರಿಯಿಸಿ (+)