ಸೋಮವಾರ, ಮಾರ್ಚ್ 1, 2021
30 °C
ಕಾಮೆಡ್‌ – ಕೆ ಸಿಇಟಿ ಮುಕ್ತಾಯ

ಜೂನ್‌ 4ರಂದು ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೂನ್‌ 4ರಂದು ಫಲಿತಾಂಶ

ಬೆಂಗಳೂರು: ಎಂಜಿನಿಯರಿಂಗ್‌, ವೈದ್ಯಕೀಯ/ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್‌ – ಕೆ ಭಾನುವಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಜೂನ್‌ 4ರಂದು ಪ್ರಕಟವಾಗಲಿದೆ.ಎಂಜಿನಿಯರಿಂಗ್‌ ವಿಭಾಗದಲ್ಲಿ 38,295 ಮಂದಿ ಹೆಸರು ನೋಂದಾಯಿಸಿದ್ದರು. ಈ ಪೈಕಿ 31,649 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ವೈದ್ಯಕೀಯ ವಿಭಾಗದಲ್ಲಿ 45,235 ಮಂದಿ ಹೆಸರು ನೋಂದಾಯಿಸಿದ್ದರು. ಇವರಲ್ಲಿ 35,167 ಮಂದಿ ಹಾಜರಾಗಿದ್ದರು. 12,507 ಮಂದಿ ಎರಡೂ ಪರೀಕ್ಷೆಗಳಿಗೆ ಹೆಸರು ನೋಂದಾ­ಯಿಸಿದ್ದು, 9,919 ಮಂದಿ ಹಾಜರಾಗಿದ್ದರು ಎಂದು ಕಾಮೆಡ್‌ – ಕೆ ತಿಳಿಸಿದೆ.ಕಾಮೆಡ್‌ – ಕೆ ಕೋಟಾದಡಿ ವೈದ್ಯಕೀಯದಲ್ಲಿ 835, ದಂತ ವೈದ್ಯಕೀಯದಲ್ಲಿ 750 ಹಾಗೂ ಎಂಜಿನಿಯರಿಂಗ್‌ನಲ್ಲಿ 18,000 ಸೀಟುಗಳು ಲಭ್ಯ ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.