ಶುಕ್ರವಾರ, ಮೇ 20, 2022
19 °C

ಜೂನ್ 12ರಂದು ಬಿಸಿಸಿಐ ತಾಂತ್ರಿಕ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶಿ ಕ್ರಿಕೆಟ್‌ಗೆ ಹೊಸ ಚೈತನ್ಯ ನೀಡುವುದು ಜೂನ್ 12ರಂದು ನಡೆಯಲಿರುವ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿರುವ ಮುಖ್ಯ ವಿಷಯ.ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ `ದೇಶಿ ಕ್ರಿಕೆಟ್ ಅಭಿವೃದ್ಧಿಪಡಿಸುವ ಕುರಿತು ವಿಶೇಷವಾಗಿ ಚರ್ಚೆ ನಡೆಸಬೇಕು~ ಎಂದು ಬಿಸಿಸಿಐ ತನ್ನ ಕಳೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ತಾಂತ್ರಿಕ ಸಮಿತಿಗೆ ಈಗಾಗಲೇ ನಿರ್ದೇಶನ ಕೂಡ ನೀಡಲಾಗಿದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ತಾಂತ್ರಿಕ ಸಮಿತಿ, ಮಾಜಿ ನಾಯಕರು ಹಾಗೂ ಕೋಚ್‌ಗಳು ನೀಡಿದ್ದ ಸಲಹೆಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಅದರಲ್ಲಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ, ಮಾಜಿ ನಾಯಕರಾದ ಅನಿಲ್ ಕುಂಬ್ಳೆ ಹಾಗೂ ಗಂಗೂಲಿ ಇದ್ದಾರೆ.

ಈ ಸಮಿತಿಯು ಸಲಹೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದು, ಆ ಕುರಿತು ಕೂಡ ಚರ್ಚೆ ನಡೆಯಬೇಕಿದೆ.

ತೆರೆದ ಪಿಚ್‌ಗಳಲ್ಲಿ ಆಡುವ ವ್ಯವಸ್ಥೆ, ಎರಡು ಪಂದ್ಯಗಳ ನಡುವಣ ಅಂತರ ಕಡಿಮೆ ಮಾಡುವುದು, ಸ್ವಂತ ಅಂಗಳದಲ್ಲಿ-ಎದುರಾಳಿ ಅಂಗಳದಲ್ಲಿ ಆಡುವ ಕಾರ್ಯಕ್ರಮ ಪಟ್ಟಿಯಲ್ಲಿ ವ್ಯತ್ಯಾಸ ಮಾಡುವುದು, ದುಲೀಪ್ ಟ್ರೋಫಿಯಲ್ಲಿ ಲೀಗ್ ಮಾದರಿ ಜಾರಿಗೊಳಿಸುವುದು ಹೀಗೆ ಅನೇಕ ವಿಷಯಗಳು ಇಲ್ಲಿ ಗುರುವಾರ ನಡೆದ ರಣಜಿ ಟ್ರೋಫಿ ನಾಯಕರು ಹಾಗೂ ಕೋಚ್‌ಗಳ ವಿಚಾರ ಸಂಕಿರಣದಲ್ಲಿ ಪ್ರಸ್ತಾವಗೊಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.