ಶುಕ್ರವಾರ, ಜೂನ್ 18, 2021
24 °C

ಜೂಹಿ ಚಾವ್ಲಾ ಸಹೋದರ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಕೋಮಾ ಸ್ಥಿತಿ­ಯಲ್ಲಿದ್ದ  ನಟಿ ಜೂಹಿ ಚಾವ್ಲಾ  ಸಹೋ­ದರ ಬಾಬಿ ಚಾವ್ಲಾ ಅವರು ಭಾನು­ವಾರ ಬೆಳಿಗ್ಗೆ ಮುಂಬೈನ ಜಸ್ಲೋಕ್‌ ಆಸ್ಪತ್ರೆ­ಯಲ್ಲಿ ನಿಧನ­ರಾದರು.   ಬಾಬಿ ಚಾವ್ಲಾ ತೀವ್ರ ಪಾರ್ಶ್ವವಾಯು ವಿ­ನಿಂದ 2010ರ ಏಪ್ರಿಲ್‌ ತಿಂಗಳಿನಿಂದ ಕೋಮಾ ಸ್ಥಿತಿಗೆ ಜಾರಿದ್ದರು.

ಇವರು ಬಾಲಿವುಡ್‌ ನಟ ಶಾರುಕ್‌­ಖಾನ್‌ ಅವರ ರೆಡ್‌ ಚಿಲ್ಲೀಸ್‌ ಎಂಟರ್‌­ಟೇನ್‌­ಮೆಂಟ್‌ ಸಂಸ್ಥೆಯಲ್ಲಿ ಸಿಇಒ ಆಗಿ ಕಾರ್ಯ­ನಿರ್ವಹಿಸಿದ್ದರು.ಸಹೋ­ದರನ ಸಾವಿನ ಬಗ್ಗೆ ಟ್ವಿಟ್ಟರ್‌­ನಲ್ಲಿ ದುಃಖ ಹಂಚಿಕೊಂಡಿರುವ ಜೂಹಿ ಚಾವ್ಲಾ, ‘ನನ್ನ ಸಹೋದರ ನನ್ನ ಜೀವ­ಮಾನ­ದಲ್ಲೇ ಅತ್ಯಂತ ದೊಡ್ಡ ಉಡು­ಗೊರೆ ನೀಡಿದ್ದಾನೆ. ಗುಲಾಬ್‌ ಗ್ಯಾಂಗ್‌ ಚಿತ್ರ ಬಿಡುಗಡೆ ಬಳಿಕ ಈ ಲೋಕದಿಂದ ತೆರಳಿ­ದ್ದಾನೆ.’ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.