ಭಾನುವಾರ, ಮೇ 9, 2021
25 °C

ಜೂ. 3ರಂದು ಅಣ್ಣಾ- ರಾಮದೇವ್ ಜಂಟಿ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರಗಾಂವ್ (ಐಎಎನ್‌ಎಸ್): ಪ್ರಬಲ ಲೋಕಪಾಲ್ ಮಸೂದೆ ಜಾರಿ ಹಾಗೂ ಕಪ್ಪು ಹಣದ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ಯೋಗಗುರು ಬಾಬಾ ರಾಮದೇವ್ ಅವರು ಜಂಟಿಯಾಗಿ ಜೂನ್ 3ರಂದು ದೆಹಲಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅಣ್ಣಾ ~ಪ್ರಬಲ ಲೋಕಪಾಲ್ ಮಸೂದೆ ಜಾರಿ ಹಾಗೂ ಕಪ್ಪು ಹಣದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವ ಉದ್ದೇಶದಿಂದ ರಾಮದೇವ್ ಜತೆ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತೇನೆ~ ಎಂದರು.`ಭ್ರಷ್ಟಾಚಾರದಲ್ಲಿ  ತಲ್ಲಿನವಾಗಿರುವ ಕೇಂದ್ರ ಸರ್ಕಾರಕ್ಕೆ ಲೋಕಪಾಲ್ ಮಸೂದೆ ಜಾರಿ ಮಾಡುವ ಉದ್ದೇಶವಿಲ್ಲ. ಈ ಕುರಿತು ಜನಾಂದೋಲನ ರೂಪಿಸುವ ಅಗತ್ಯವಿದೆ, ಬದಲು ನಮಗೆ ಸರ್ಕಾರವನ್ನು ಪತನ ಮಾಡುವ ಉದ್ದೇಶವಿಲ್ಲ~ ಎಂದು ಅಣ್ಣಾ ಹಾಗೂ ರಾಮದೇವ್ ತಿಳಿಸಿದರು`ಭ್ರಷ್ಟಾಚಾರದಲ್ಲಿ ಪ್ರಸ್ತುತ ಸರ್ಕಾರ ಪದವಿಯನ್ನು ಪಡೆಯಲು ಇಚ್ಛಿಸಿದರೆ, ಮುಂದಿನ ಸರ್ಕಾರವು ಇದರಲ್ಲಿ ಪಿಎಚ್‌ಡಿ ಪದವಿಯನ್ನು ಪಡೆಯಲು ಪ್ರಯತ್ನಿಸುತ್ತದೆ. ಆದರೆ, ಸರ್ಕಾರವು ಜನರ ಧ್ವನಿಯನ್ನು ಕೇಳಿಸಿಕೊಳ್ಳುತ್ತಿಲ್ಲ~ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದರು.ಭ್ರಷ್ಟಾಚಾರದ ವಿರುದ್ಧ ದೇಶಾದಾದ್ಯಂತ ಚಳವಳಿಯನ್ನು ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.