ಭಾನುವಾರ, ಆಗಸ್ಟ್ 25, 2019
28 °C

ಜೆಎನ್‌ಯು ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

Published:
Updated:

ನವದೆಹಲಿ (ಐಎಎನ್‌ಎಸ್): ಸಹಪಾಠಿಯ ಕೊಡಲಿ ಏಟಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರೋಶನಿಯ ಸ್ಥಿತಿ ಚಿಂತಾಜನಕವಾಗಿದೆ.ರೋಶನಿಗೆ ನಾಲ್ಕು ದೊಡ್ಡ ಗಾಯಗಳಾಗಿದ್ದು, ತಲೆಯ ಬುರುಡೆ ಮತ್ತು ಮಿದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳು ತೀವ್ರ ಹಾನಿಗೊಂಡಿವೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೊಡಲಿ ಏಟಿನ ದಾಳಿಯಿಂದ ರೋಶನಿ ಅವರ ಬಲಭಜಕ್ಕೆ ಭಾರಿ ಏಟು ಬಿದ್ದಿದೆ ಎಂದು ವೈದ್ಯರು ಹೇಳಿದ್ದಾರೆ.

Post Comments (+)