ಜೆಎಸ್‌ಡಬ್ಲ್ಯು ತಂಡಕ್ಕೆ ಚೆಟ್ರಿ

ಸೋಮವಾರ, ಜೂಲೈ 22, 2019
27 °C

ಜೆಎಸ್‌ಡಬ್ಲ್ಯು ತಂಡಕ್ಕೆ ಚೆಟ್ರಿ

Published:
Updated:

ಬೆಂಗಳೂರು: ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಐ-ಲೀಗ್‌ನ ಹೊಸ ತಂಡ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಚೆಟ್ರಿ ಭವಿಷ್ಯದ ಬಗ್ಗೆ ಎದ್ದಿದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ.ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ತಂಡದ ಅನಾವರಣ ಸಮಾರಂಭ ಬೆಂಗಳೂರಿನಲ್ಲಿ ಶನಿವಾರ ನಡೆಯಲಿದೆ. ಚೆಟ್ರಿ ಈ ತಂಡವನ್ನು ಸೇರುವರು ಎಂಬ ಮಾತು ಕೆಲ ದಿನಗಳ ಹಿಂದೆಯೇ ಕೇಳಿಬಂದಿತ್ತು. ಅದು ಈಗ ಖಚಿತವಾಗಿದೆ.`ನಾನು ಕೆಲ ತಿಂಗಳ ಹಿಂದೆ ಜೆಎಸ್‌ಡಬ್ಲ್ಯು ತಂಡದ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತನಾಡಿದ್ದೆ. ತಂಡ ರೂಪಿಸಿರುವ ಯೋಜನೆಯು ನನಗೆ ಬಹಳವಾಗಿ ಹಿಡಿಸಿತು. ಒಂದು ಸ್ಪಷ್ಟ ಗುರಿಯನ್ನು ಹೊಂದಿರುವ ತಂಡಕ್ಕಾಗಿ ಆಡುವುದು ನನ್ನ ಬಯಕೆಯಾಗಿತ್ತು.  ಜೆಎಸ್‌ಡಬ್ಲ್ಯು ತಂಡದಲ್ಲಿ ಅದನ್ನು ಕಾಣಲು ಸಾಧ್ಯ. ಚಾಂಪಿಯನ್ ತಂಡವೊಂದನ್ನು ತೊರೆದು ಇಲ್ಲಿಗೆ ಬರುತ್ತಿದ್ದೇನೆ ಎಂಬುದು ನನಗೆ ತಿಳಿದಿದೆ. ಆದರೆ ಇದು ನನಗೆ ಹೆಚ್ಚಿನ ಉತ್ತೇಜನ ನೀಡಲಿದೆ' ಎಂದು ಪ್ರಕಟಣೆಯಲ್ಲಿ ಚೆಟ್ರಿ ತಿಳಿಸಿದ್ದಾರೆ.ಚೆಟ್ರಿ ಪೋರ್ಚುಗಲ್‌ನ ತಂಡ ಸ್ಪೋರ್ಟಿಂಗ್ ಕ್ಲಬ್ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅಲ್ಲಿ ಅವರಿಗೆ ಆಡಲು ಹೆಚ್ಚಿನ ಅವಕಾಶ ಲಭಿಸಿರಲಿಲ್ಲ. ಹೋದ ಐ-ಲೀಗ್ ಋತುವಿನ ಕೊನೆಯ ಕೆಲವು ಪಂದ್ಯಗಳಲ್ಲಿ ಚರ್ಚಿಲ್ ಬ್ರದರ್ಸ್ ಪರ ಆಡಿದ್ದರು.ಪೋರ್ಚುಗಲ್‌ಗೆ ತೆರಳಿ ಸ್ಪೋರ್ಟಿಂಗ್ ಕ್ಲಬ್ ತಂಡದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಚೆಟ್ರಿ ಇತ್ತೀಚೆಗೆ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry