ಜೆಟ್ ಏರ್‌ವೇಸ್ ವಿರುದ್ಧ ತನಿಖೆ

7

ಜೆಟ್ ಏರ್‌ವೇಸ್ ವಿರುದ್ಧ ತನಿಖೆ

Published:
Updated:

ನವದೆಹಲಿ (ಪಿಟಿಐ):  ಅಂಗವಿಕಲ ಮಹಿಳೆಯೊಬ್ಬರೊಂದಿಗೆ ದುರ್ವರ್ತನೆ ತೋರಿದ ಆರೋಪವನ್ನು ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆ ವಿರುದ್ಧ ಹೊರಿಸಲಾಗಿದೆ.ಆರೋಪದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರತ್ಯೇಕ ತನಿಖೆಗೆ ಆದೇಶಿಸಿವೆ.ಈ ಘಟನೆಯು ದೆಹಲಿ ಮತ್ತು ರಾಯಪುರದ ನಡುವೆ ಸಂಚರಿಸುವ ವಿಮಾನದಲ್ಲಿ ನಡೆದಿದೆ. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ, ಸರ್ಕಾರೇತರ ಸಂಸ್ಥೆಯೊಂದರ ಮುಖ್ಯಸ್ಥೆಯಾಗಿರುವ ಅಂಜಲಿ ಅಗರ್‌ವಾಲ್ ಎಂಬುವವರು ಈ ಆರೋಪ ಮಾಡಿದ್ದಾರೆ.  ಕಾಯಿಲೆಯಿಂದಾಗಿ ಯಾವಾಗಲೂ ಗಾಲಿ ಕುರ್ಚಿಯನ್ನು ಬಳಸುವ ಅಗರ್‌ವಾಲ್ ಅವರಿಗೆ ವಿಮಾನದಿಂದ ಕೆಳಗಿಳಿಯಲು ಗಾಲಿ ಕುರ್ಚಿ ನಿರಾಕರಿಸಲಾಯಿತು ಮತ್ತು ಪುರುಷರ ನೆರವಿನಿಂದ ಅವರನ್ನು ಎತ್ತಿಕೊಂಡು ಹೋಗುವ ಬೆದರಿಕೆ ಒಡ್ಡಲಾಯಿತು ಎಂತು ಆರೋಪಿಸಲಾಗಿದೆ.ಘಟನೆ ಸಂಬಂಧ ಜೆಟ್ ಏರ್‌ವೇಸ್ ತನಿಖೆಗೆ ಆದೇಶಿಸುತ್ತಿರುವಂತೆಯೇ, ಡಿಜಿಸಿಎ ಕೂಡ ಪ್ರಕರಣದ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.ಭಾನುವಾರವಷ್ಟೆ ಜೀಜಾ ಘೋಷ್ ಎಂಬ ಅಂಗವಿಕಲ ಮಹಿಳೆಯೊಬ್ಬರನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಿದ ಆರೋಪವನ್ನು ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಹೊರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry