ಜೆಟ್ ಏರ್‌ವೇಸ್: ಸಿಬ್ಬಂದಿ ತಪ್ಪು ಗ್ರಹಿಕೆ

ಮಂಗಳವಾರ, ಮೇ 21, 2019
32 °C

ಜೆಟ್ ಏರ್‌ವೇಸ್: ಸಿಬ್ಬಂದಿ ತಪ್ಪು ಗ್ರಹಿಕೆ

Published:
Updated:

ನವದೆಹಲಿ, (ಪಿಟಿಐ): ಕಳೆದ ತಿಂಗಳು ನಡೆದ ಘಟನೆಯೊಂದರಲ್ಲಿ ಜೆಟ್ ಏರ್‌ವೇಸ್‌ಗೆ ಸೇರಿದ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಕೆಂಪು ಬೆಳಕನ್ನು ಸಿಬ್ಬಂದಿ ವರ್ಗದವರು ಬೆಂಕಿ ಎಂದು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ವಿಮಾನವನ್ನು ತುರ್ತಾಗಿ ಇಳಿಸಿದ್ದರಿಂದ ಸುಮಾರು 25 ಪ್ರಯಾಣಿಕರು ಗಾಯಗೊಂಡಿದ್ದರು  ಎಂದು ತನಿಖಾ ವರದಿ ತಿಳಿಸಿದೆ.ಮುಂಬೈ-ಚೆನ್ನೈ 9ಡಬ್ಲ್ಯೂ-2302 ವಿಮಾನ ಕ್ಯಾಬಿನ್‌ನಲ್ಲಿ ಬೆಂಕಿಯಾಗಲಿ ಹೊಗೆಯಾಗಲಿ ಕಾಣಿಸಿಕೊಂಡಿರಲಿಲ್ಲ ಎಂದು ನಾಗರಿಕ ವಿಮಾನಯಾನ ವಿಭಾಗದ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಇದೇ ವೇಳೆ ಬೆಂಕಿಯ ಕುರಿತು ವಿಮಾನದ ಕಾಕ್‌ಪಿಟ್‌ನೊಳಗಿನ ಇಂಡಿಕೇಟರ್‌ಗಳು ಯಾವುದೇ ಸೂಚನೆ ನೀಡದಿದ್ದರೂ ಕೂಡ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಪೈಲಟ್ ಅಜಾಗರೂಕತೆಯಿಂದ ವರ್ತಿಸ್ದ್ದಿದರು ಎಂದು ಡಿಜಿಸಿಎ ಆರೋಪಿಸಿದೆ.ವಿಮಾನದಲ್ಲಿ ಒಟ್ಟು 139 ಪ್ರಯಾಣಿಕರಿದ್ದರು. ಇವರನ್ನು ತುರ್ತಾಗಿ ತೆರವುಗೊಳಿಸುವ ವೇಳೆ 21 ಮಂದಿ ಗಾಯಗೊಂಡ್ದ್ದಿದರಲ್ಲದೆ ನಾಲ್ಕು ಮಂದಿಯ ಪರಿಸ್ಥಿತಿ ಗಂಭೀರವಾಗಿತ್ತು ಎಂದು 35 ಪುಟಗಳ ವರದಿ ತಿಳಿಸಿದೆ. 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry