ಜೆಡಿಎಸ್‌ಗೆ ಸೇರ್ಪಡೆ: ಅಶ್ವತ್ಥನಾರಾಯಣ

7

ಜೆಡಿಎಸ್‌ಗೆ ಸೇರ್ಪಡೆ: ಅಶ್ವತ್ಥನಾರಾಯಣ

Published:
Updated:

ಗೌರಿಬಿದನೂರು: `ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ~ ಎಂದು ಮಾಜಿ ಸಚಿವ ಎಸ್.ವಿ.ಅಶ್ವತ್ಥನಾರಾಯಣರೆಡ್ಡಿ ತಿಳಿಸಿದರು.`ನಾನು ಈಗ ಸದ್ಯಕ್ಕೆ ಕಾಂಗ್ರೆಸ್‌ನಲ್ಲಿದ್ದೇನೆ. ಮಾರ್ಚ್ ಮೊದಲನೇ ವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದೇನೆ. ಇದರ ಬಗ್ಗೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್.ಜ್ಯೋತಿರೆಡ್ಡಿ ಅವರಿಗೂ ಮಾಹಿತಿ ನೀಡಲಾಗಿದೆ. ಜ್ಯೋತಿರೆಡ್ಡಿ ಅವರನ್ನು ವಿಧಾನ ಪರಿಷತ್ ಸದಸ್ಯೆಯರನ್ನಾಗಿಸಲು ಮತ್ತು ನನಗೆ ಚುನಾವಣೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ~ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.ಆದರೆ ಈ ಸಂಗತಿಯನ್ನು ಅಲ್ಲಗಳೆದಿರುವ ಎನ್.ಜ್ಯೋತಿರೆಡ್ಡಿ, `ಹೊರಗಡೆಯಿಂದ ಬಂದು ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಅಶ್ವತ್ಥನಾರಾಯಣರೆಡ್ಡಿ ಅವರ ಜೊತೆಗೆ ನಾನು ದೇವೇಗೌಡರ ಮನೆಗೆ ಹೋಗಿಲ್ಲ~ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry