ಮಂಗಳವಾರ, ನವೆಂಬರ್ 19, 2019
22 °C

`ಜೆಡಿಎಸ್‌ನಲ್ಲಿ ಯಾವುದೂ ಸರಿಯಿಲ್ಲ'

Published:
Updated:

ರಾಣೆಬೆನ್ನೂರು:  `ಜೆಡಿಎಸ್‌ನಲ್ಲಿ ಯಾವುದು ಸರಿಯಿಲ್ಲ, ಈ ಬಾರಿ ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು, ನಂತರ  ನಿನ್ನೆ ಮೊನ್ನೆ ಪಕ್ಷಕ್ಕೆ ಸೇರಿದವರಿಗೆ ಟಿಕೆಟ್ ನೀಡಿ ನನಗೆ ದ್ರೋಹವೆಸಗಿದರು. ಹೀಗಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿ ಆರ್. ಶಂಕರವರಿಗೆ ಬೆಂಬಲಿಸಲು ನಿರ್ಧರಿಸಿದ್ದೇನೆ' ಎಂದು ಡಾ.ಮೋಹನ ಹಂಡೆ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಇದ್ದಷ್ಟು ಕಾಲ ಪಕ್ಷದ ಏಳ್ಗೆಗೆ  ಸೇವೆ ಸಲ್ಲಿಸಿದ್ದೇನೆ, ಕೊನೆ ಹಂತದವರೆಗೂ ತಮಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿ ಮೋಸ ಮಾಡಿ, ಅಗೌರವದಿಂದ ನಡೆದು ಕೊಂಡರು, ಅದಕ್ಕಾಗಿ ಅನಿವಾರ್ಯ ವಾಗಿ ಪಕ್ಷ ಬಿಡಬೇಕಾಗಿ ಬಂದಿತು ಎಂದು ಹಂಡೆ ತಿಳಿಸಿದರು.ವಿಧಾನಸಭಾ ಚುನಾವಣೆಯ ಟಿಕೆಟ್‌ಗಳು ಅಂಗಡಿಯಲ್ಲಿ ಸಿಗುವ ಮಾರಾಟದ ವಸ್ತುಗಳಾಗಿವೆ, ಜೆಡಿಎಸ್‌ನ್ಲ್ಲಲಿ ಇದು ಹೆಚ್ಚಾಗಿದ್ದು ಹರಾಜಿ ನಂತಾಗಿದೆ, ದುಡ್ಡು, ಹಣ ಇಲ್ಲದೇ ಚುನಾವಣೆ ಎದುರಿಸುವುದು ಅಸಾಧ್ಯ ವಾಗಿದೆ, ಯಾರಿಗೆ ಯಾರ ಮೇಲೂ ನಂಬಿಕೆ, ವಿಶ್ವಾಸ ಇಲ್ಲ ದಂತಾಗಿದೆ ಎಂದು ವಿಷಾದಿಸಿದರು. ಸಿದ್ಧಣ್ಣ ಅಡಿ ವೇರ, ಮಾಲತೇಶ ಪಾಟೀಲ, ದೇವೇಂ ದ್ರಪ್ಪ ಗೌಡರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)