ಗುರುವಾರ , ನವೆಂಬರ್ 21, 2019
20 °C

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ

Published:
Updated:

ಕೊಪ್ಪಳ: ನಗರದ 21ನೇ ವಾರ್ಡ್‌ನ ಜೆಡಿಎಸ್ ಕಾರ್ಯಕರ್ತರು ಭಾನುವಾರ ನಗರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.ಶಾಸಕ ಸಂಗಣ್ಣ ಕರಡಿ ಸಮ್ಮುಖದಲ್ಲಿ ನಾಗರಾಜ ಚಲವಾದಿ, ಪಾರ್ವತಿ ವಾಲ್ಮೀಕಿ, ಅಣ್ಣಪ್ಪ ಕಾಟಿಕರ್, ಸೋಮಶೇಖರ ಹಿರೇಮಠ, ಪಂಪಣ್ಣ ಕೊಡಲ್, ಮಂಜುನಾಥ ಕಾಟಿಕರ್, ಗುರುನಾಥ ಉಪ್ಪಾರ, ಶಂಕರ ಉಪ್ಪಾರ, ಮಲ್ಲೇಶಪ್ಪ ಚಲವಾದಿ, ಬಸವರಾಜ ಸಕ್ಕರಿ, ಈರಣ್ಣ ಪೂಜಾರ, ಪರಶುರಾಮ ಚಲವಾದಿ, ಬುಡನಸಾಬ, ಪೀರಸಾಬ್, ಶಂಕ್ರಪ್ಪ ವಾಲ್ಮೀಕಿ, ಮಹಿಬೂಬ್ ಬಾಷಾ ಟಾಂಗಾವಾಲಾ, ಶ್ರೀಕಾಂತ, ಮಂಜುನಾಥ ಚಲವಾದಿ, ಶರಣಪ್ಪ ಚಲವಾದಿ, ರೇಣುಕಾ ವಾಲ್ಮೀಕಿ, ಭರಮಮ್ಮ ವಾಲ್ಮೀಕಿ, ಜ್ಯೋತಿ ಚಲವಾದಿ, ಶರಣಮ್ಮ ಚಲವಾದಿ, ಭೀಮಮ್ಮ ವಾಲ್ಮೀಕಿ , ನಾಗರತ್ನ ಚಲವಾದಿ, ಗೀತಾ ಚಲವಾದಿ, ಬಸಮ್ಮ ಚಲವಾದಿ, ಜಯಶ್ರೀ ಚಲವಾದಿ, ಕಮಲಾಕ್ಷಿ ಚಲವಾದಿ, ಪ್ರೇಮಾ, ರತ್ನಾ ಬಾಯಿ ಬಿಜೆಪಿಗೆ ಸೇರ್ಪಡೆಯಾದರು.ಕಚೇರಿ ಉದ್ಘಾಟನೆ: ನಂತರ ಗದಗ ರಸ್ತೆಯ ಕೆಎಚ್‌ಬಿ ಕಾಲೋನಿ ಎದುರಿನ ಕಟ್ಟಡದಲ್ಲಿ ಭಾನುವಾರ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಾಯಿತು.ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಗಿರೇಗೌಡ್ರ, ಸಂಸದ ಶಿವರಾಮಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ನಗರ ಘಟಕದ ಅಧ್ಯಕ್ಷ ಸದಾಶಿವಯ್ಯ ಹಿರೇಮಠ, ಗ್ರಾಮಾಂತರ ಘಟಕದ ಅಧ್ಯಕ್ಷ ಫಕೀರಪ್ಪ ಆರೇರ್, ನರಸಿಂಗರಾವ್ ಕುಲಕರ್ಣಿ, ವಿ.ಎಂ.ಭೂಸನೂರಮಠ, ಕಳಕಪ್ಪ ಜಾಧವ, ಮಂಜುನಾಥ ಹಳ್ಳಿಕೇರಿ, ರಾಜು ಬಾಕಳೆ, ಹೇಮಲತಾ ನಾಯಕ, ಹೇಮಕ್ಕ ಮಂಗಳೂರ, ಸರೋಜಾ ಬಾಕಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ವಕ್ತಾರ ಹಾಲೇಶ ಕಂದಾರಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)