ಜೆಪಿಸಿಯಿಂದ ಶೀಘ್ರ ಮಾರನ್ ವಿಚಾರಣೆ

ಸೋಮವಾರ, ಜೂಲೈ 15, 2019
25 °C

ಜೆಪಿಸಿಯಿಂದ ಶೀಘ್ರ ಮಾರನ್ ವಿಚಾರಣೆ

Published:
Updated:

ನವದೆಹಲಿ (ಐಎಎನ್‌ಎಸ್) : 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಸಿಲುಕಿರುವ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಶೀಘ್ರ ವಿಚಾರಣೆಗೆ ಒಳಪಡಿಸಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಸಿ. ಚಾಕೊ ತಿಳಿಸಿದ್ದಾರೆ. `ಮಾರನ್ ಅವರು ದೂರಸಂಪರ್ಕ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಕೈಗೊಳ್ಳಲಾದ ಯೋಜನೆಗಳು ಮತ್ತು ತೀರ್ಮಾನಗಳ ಬಗ್ಗೆ ಎಲ್ಲಾ ದಾಖಲೆಗಳನ್ನು ನೀಡುವಂತೆ ದೂರಸಂಪರ್ಕ ಇಲಾಖೆಗೆ ಸೂಚಿಸಲಾಗಿದೆ.  ಅವರನ್ನು ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗುವುದು. ಅಲ್ಲದೆ ದೂರಸಂಪರ್ಕ ಇಲಾಖೆಯ ಎಲ್ಲಾ ಮಾಜಿ ಸಚಿವರು, ಕಾರ್ಯದರ್ಶಿಗಳು ಮತ್ತು ಟ್ರಾಯ್‌ನ ಮಾಜಿ ಅಧ್ಯಕ್ಷರುಗಳನ್ನು ಸಹ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ನಿರ್ಧರಿಸಲಾಗಿದೆ~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry