ಸೋಮವಾರ, ನವೆಂಬರ್ 18, 2019
26 °C

ಜೆಪಿಸಿ ವರದಿ `ಸೋರಿಕೆ'- ರಾಜಕೀಯ ಬಿರುಗಾಳಿ

Published:
Updated:

ನವದೆಹಲಿ (ಪಿಟಿಐ): ಸಂಸತ್ತಿನಲ್ಲಿ ಮಂಡನೆಯಾಗುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿರುವ 2 ಜಿ ಹಗರಣ ಕುರಿತ ಜಂಟಿ ಸಂಸದೀಯ ಸಮಿತಿ ವರದಿಯು ರಾಜಕೀಯ ಬಿರುಗಾಳಿ ಎಬ್ಬಿಸಿದೆ.ಈ ಮಧ್ಯೆ, ವರದಿಯಲ್ಲಿರುವಂತೆ ಹಗರಣದ ದೋಷಿಯಾಗಿರುವ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು, `ಪ್ರಧಾನಿ ಮನಮೋಹನ್ ಸಿಂಗ್ ಅವರೊಡನೆ ಸಮಾಲೋಚನೆ ನಡೆಸಿದ ನಂತರವೇ ನಿರ್ಧಾರಗಳನ್ನು ಕೈಗೊಂಡಿದ್ದೆ.  ಈ ಸಂಬಂಧ ಸಮಿತಿಗೆ ಮುಂದಿನ ವಾರ ವಿವರವಾದ ಟಿಪ್ಪಣಿ ಕಳುಹಿಸಿತ್ತೇನೆ' ಎಂದಿದ್ದಾರೆ.`ನನ್ನನ್ನು ಬಂಧಿಸಿದ ನಂತರ, ನ್ಯಾಯಾಲಯದಲ್ಲಿ ಕೂಡ ಇದೇ ವಾದವನ್ನು ಮಂಡಿಸಿದ್ದೆ. ಆರೋಪಪಟ್ಟಿ ನಿಗದಿ ಮಾಡುವುದಾಗಲೂ ಇದನ್ನೇ ಹೇಳಿದ್ದೆ. ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ' ಎಂದು ರಾಜಾ ಚೆನ್ನೈನಲ್ಲಿ ಸುದ್ದಿಗಾರರ ಬಳಿ ಹೇಳಿದರು.

ಸಮಿತಿ ಮುಖ್ಯಸ್ಥ ಪಿ.ಸಿ.ಚಾಕೊ ಅವರು ಈ ವರದಿಯನ್ನು ನೆಪ ಮಾಡಿಕೊಂಡು ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರತಿಪಕ್ಷವಾದ ಬಿಜೆಪಿ ವ್ಯಂಗ್ಯವಾಡಿದೆ.ಪ್ರಧಾನಿ ಮನಮೋಹನ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರನ್ನು ದೋಷಮುಕ್ತಗೊಳಿಸಿರುವ ವರದಿಯನನ್ನು ಚಾಕೊ ಸಮರ್ಥಿಸಿಕೊಂಡಿದ್ದಾರೆ. 10 ವರ್ಷಗಳ ಅವಧಿಯ ಪರಾಮರ್ಶೆ ನಿಯಮಾವಳಿಯನ್ನು ಗಮನದಲ್ಲಿರಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.ನಿಯಮಾವಳಿಯನ್ನು ಕಾಲಾನುಕ್ರಮಕ್ಕೆ ಅನುಗುಣವಾಗಿ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಸೀಮಿತ ಅವಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಿಲ್ಲ. ರಾಜಕಾರಣದ ದೃಷ್ಟಿಯಿಂದ ಅದನ್ನು ನೋಡಬಾರದು ಎಂದು ಚಾಕೊ ಅಭಿಪ್ರಾಯಪಟ್ಟಿದ್ದಾರೆ.ವರದಿಯು ಸಂಸತ್ತಿನಲ್ಲಿ ಮಂಡನೆಯಾಗಿ ಚರ್ಚೆಯಾಗುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಇದರಿಂದ ಸಂಸದೀಯ ಶಿಷ್ಟಾಚಾರ ಎಗಿಲ್ಲದೆ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ದೆಹಲಿಯಲ್ಲಿ ಹೇಳಿದ್ದಾರೆ. ಇದೊಂದು ಪೂರ್ವ ನಿರ್ಧಾರಿತ ಮತ್ತು ಪೂರ್ವಗ್ರಹ ಪೀಡಿತ ವರದಿ ಎಂದು ಸಿಪಿಐ ಖಂಡಿಸಿದೆ.ಈ ಮಧ್ಯೆ, ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು, `ವರದಿ ಇನ್ನೂ ಅಂತಿಮಗೊಂಡಿಲ್ಲ. ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ಈಗಲೇ ಈ ಕುರಿತು ಚರ್ಚಿಸಬಾರದು ಎಂದಿದ್ದಾರೆ.ಕರುಣಾ ಅಚ್ಚರಿ

ಚೆನ್ನೈವರದಿ: ಜೆಪಿಸಿ ವರದಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ, ಒಬ್ಬ ಸಚಿವರು ಪ್ರಧಾನಿಯಾದವರನ್ನು ಅದು ಹೇಗೆ ದಾರಿ ತಪ್ಪಿಸಲು ಸಾಧ್ಯ ಎಂದು ಕೇಳಿದ್ದಾರೆ.

ಪ್ರತಿಕ್ರಿಯಿಸಿ (+)