ಜೆಸಿಂತಾ ಸಾವು : ಡಿಜೆಗಳಿಗೆ ಜೀವ ಬೆದರಿಕೆ ಕರೆ

7

ಜೆಸಿಂತಾ ಸಾವು : ಡಿಜೆಗಳಿಗೆ ಜೀವ ಬೆದರಿಕೆ ಕರೆ

Published:
Updated:

ಮೆಲ್ಬೋರ್ನ್ (ಪಿಟಿಐ): ಹುಸಿ ಕರೆ ಮೂಲಕ ಮಂಗಳೂರು ಮೂಲದ ನರ್ಸ್ ಜೆಸಿಂತಾ ಅವರ ನಿಗೂಢ ಸಾವಿಗೆ ಕಾರಣರಾದ ರೇಡಿಯೊ `2ಡೇ ಎಫ್‌ಎಂ'ನ ನಿರೂಪಕರಲ್ಲಿ (ಡಿಜೆ) ಒಬ್ಬರಾದ ಮೈಕೆಲ್ ಕ್ರಿಸ್ಟಿಯಾನ ಅವರಿಗೆ ಗುರುವಾರ ಜೀವ ಬೆದರಿಕೆ ಪತ್ರ ಬಂದ ಪರಿಣಾಮ ಎಫ್ಎಂನ ಹಲವು ಡಿಜೆಗಳು ಸುರಕ್ಷಿತ ಗೃಹಗಳಿಗೆ ತೆರಳುತ್ತಿದ್ದಾರೆ.

ಜೀವ ಬೆದರಿಕೆ ಕರೆಗಳಿಂದಾಗಿ ಸಿಡ್ನಿ ಮೂಲದ 2ಡೇ ಎಫ್ಎಂನ 12ಕ್ಕೂ ಹೆಚ್ಚು ಸಿಬ್ಬಂದಿಗಳು ಸುರಕ್ಷಿತ ಗೃಹಗಳಿಗೆ ತೆರಳಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳಿಗೆ ಅಂಗರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಸಿಬ್ಬಂದಿಗಳ ರಕ್ಷಣೆ ಮತ್ತು ಸುರಕ್ಷಿತ ಗೃಹಗಳ ರಕ್ಷಣೆಗಾಗಿ ರೇಡಿಯೋ ಆಡಳಿತ ಮಂಡಳಿ 24 ಗಂಟೆಯೂ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಭದ್ರತಾ ವೆಚ್ಚವು ವಾರಕ್ಕೆ ಅಂದಾಜು 75 ಸಾವಿರ ಡಾಲರ್ ತಲುಪಿದೆ ಎಂದು ವರದಿಯೊಂದು ತಿಳಿಸಿದೆ. 

ದಕ್ಷಿಣ ಆಸ್ಟ್ರೇಲಿಯಾ ಭಾಗದಿಂದ ಬೆದರಿಕೆ ಪತ್ರ ಬಂದಿದ್ದು, ವಿಚಾರಣೆಗಾಗಿ ಪತ್ತೆದಾರರು ಆ ಪತ್ರವನ್ನು ವಶಕ್ಕೆ ಪಡೆದಿದ್ದಾರೆ.

ಜೀವ ಬೆದರಿಕೆ ಪ್ರಕrಣದ ಬಗ್ಗೆ ಆಸ್ಟ್ರೇಲಿಯಾದ ಪೊಲೀಸರು ತನಿಖೆ ಆರಂಭಿಸಿದ್ದು, ಡಿಜೆ ಮೈಕೆಲ್ ಕ್ರಿಸ್ಟಿಯಾನ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವ ದಕ್ಷಿಣ ಆಸ್ಟ್ರೇಲಿಯಾ ಭಾಗದ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry