ಭಾನುವಾರ, ಆಗಸ್ಟ್ 18, 2019
24 °C

ಜೇವರ್ಗಿ ಮಹಾಲಕ್ಷ್ಮೀ ಮಹಾಪರ್ವ ನಾಳೆ

Published:
Updated:

ಜೇವರ್ಗಿ: ಬೀದರ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿರುವ  ಕೃಷಿ ವಿಜ್ಞಾನ ಕೇಂದ್ರದ ಹತ್ತಿರದ ಮಹಾಲಕ್ಷ್ಮೀ ಮಂದಿರದಲ್ಲಿ ಆ. 2 ರಂದು  ಪಟ್ಟಣದ ಆರಾಧ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾಪರ್ವ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.ಪ್ರತಿ ವರ್ಷ ಆಷಾಡ ಮಾಸದಲ್ಲಿ ನಡೆಯುವ ಈ ಆಚರಣೆಯಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲಾ ಸಮುದಾಯದವರು ಅತ್ಯಂತ ಶ್ರದ್ಧೆಯಿಂದ ಭಾಗವಹಿಸುತ್ತಾರೆ.ಬೆಳಗಿನ ಜಾವದಲ್ಲಿ ಹೊಸ ವಸ್ತ್ರಗಳನ್ನು ಧರಿಸಿ ವಿವಿಧ ಬಗೆಯ ಅಡುಗೆ ತಯಾರಿಸಿ ಕುಟುಂಬದವರೆಲ್ಲರೂ ಕೂಡಿಕೊಂಡು ನಾಲ್ಕು ಕಿ.ಮೀ.ದೂರದ ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ತೆರಳಿ ದೇವಿಯ ದರ್ಶನ ಪಡೆಯುವರು.ಪೂಜೆ ಸಲ್ಲಿಸಿ, ನೈವೇದ್ಯೆ ಅರ್ಪಿಸಿ   ಹರಕೆ    ತೀರಿಸುತ್ತಾರೆ.ಈ ನಾಡಿನಲ್ಲಿ ಸುಖ ಶಾಂತಿ ನೆಲೆಸಲಿ ಹುಲುಸಾಗಿ ಬೆಳೆಗಳು ಬೆಳೆಯುವಂತಾಗಲಿ' ಎಂದು ಭಕ್ತರು ಬೇಡಿಕೊಳ್ಳುವುದರ ಜೊತೆಗೆ ತಮ್ಮ ವೈಯಕ್ತಿಕ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸುವರು. ನಂತರ ಸಾಮೂಹಿಕವಾಗಿ ತಮ್ಮ ತಮ್ಮ ಅಡುಗೆ ಹಂಚಿಕೊಂಡು ಊಟಮಾಡುವರು.ದೇವಸ್ಥಾನದ ಟ್ರಸ್ಟ ಕಮಿಟಿ ಸಭೆ ಕರೆದು ಪರ್ವದ ದಿನ ನಿಗದಿ ಮಾಡಿ ಪರ್ವಕ್ಕೆ ಮುಂಚಿತವಾಗಿ ಮಂಗಳವಾರ ಮತ್ತು ಶುಕ್ರವಾರದಂತೆ ಐದು ವಾರಗಳ ನಿರಂತರವಾಗಿ ಪಟ್ಟಣದಲ್ಲಿರುವ ದೇವಿಗೆ ನೀರು ಮತ್ತು ತನ್ನುಂಡಿ ನೈವೇದ್ಯೆ ಸಲ್ಲಿಸುತ್ತಾರೆ.ಕೊನೆಯ ಶುಕ್ರವಾರ ಈ ಪರ್ವ ಆಚರಿಸಲಾಗುತ್ತದೆ. ಪರ್ವಕ್ಕೆ ಬರುವ ಸಾವಿರಾರು ಭಕ್ತ ಸಮೂಹಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸಾರಿಗೆ ಸೌಲಭ್ಯ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.

Post Comments (+)