ಜೇವರ್ಗಿ: ಸಾಲದ ಬಾಧೆ, ರೈತ ಆತ್ಮಹತ್ಯೆ

ಭಾನುವಾರ, ಜೂಲೈ 21, 2019
23 °C

ಜೇವರ್ಗಿ: ಸಾಲದ ಬಾಧೆ, ರೈತ ಆತ್ಮಹತ್ಯೆ

Published:
Updated:

ಜೇವರ್ಗಿ: ಸಾಲದ ಬಾಧೆಯಿಂದ ಮನನೊಂದು ರೈತನೊಬ್ಬ ಮನೆಯಲ್ಲಿಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕೆಲ್ಲೂರ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ 7ಗಂಟೆ ಸುಮಾರಿಗೆ ಸುಮಾರಿಗೆ ಸಂಭವಿಸಿದ ಬಗ್ಗೆ ವರದಿಯಾಗಿದೆ.ಮೃತ ರೈತನನ್ನು ಸಿದ್ದಪ್ಪ ತಿಪ್ಪಣ್ಣ ಶರ್ಮಾ (45) ಎಂದು ಗುರುತಿಸಲಾಗಿದೆ. ಮೃತ ರೈತನಿಗೆ ಎರಡು ಯಕರೆ ಜಮೀನು ಇದೆ. ಮೃತನಿಗೆ ಪತ್ನಿ, ನಾಲ್ಕುಜನ ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಸಿದ್ದಪ್ಪ ಗುಲ್ಬರ್ಗದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಶಾಖೆಯಲ್ಲಿ ಟ್ರ್ಯಾಕ್ಟರ್ ಮೇಲೆ ಸಾಲ ಪಡೆದಿದ್ದರೆಂದು ತಿಳಿದುಬಂದಿದೆ.ಬ್ಯಾಂಕ್‌ನಲ್ಲಿ ಸಾಲದ ಮೊತ್ತ ಏಷ್ಟು ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲವೆಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕ್ಷಯರೋಗದಿಂದ ಬಳಲುತ್ತಿದ್ದ ಸಿದ್ದಪ್ಪ ಶರ್ಮಾ ಕ್ಷಯರೋಗ ಮತ್ತು ಬ್ಯಾಂಕ್ ಸಾಲದಿಂದ ಮನನೊಂದುಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ರೈತನ ಪತ್ನಿ ಸಿದ್ದಮ್ಮ ಸಿದ್ದಪ್ಪ ಶರ್ಮಾ ಅವರು ದೂರಿನಲ್ಲಿ ವಿವರಿಸಿದ್ದಾರೆ.ಘಟನಾ ಸ್ಥಳಕ್ಕೆ ಪ್ರೊಬೆಷನರಿ ಎಎಸ್‌ಪಿ ಆರ್. ಚೇತನ್, ಜೇವರ್ಗಿ ಸರ್ಕಲ್ ಇನ್ಸಪೆಕ್ಟರ್ ವಿಶ್ವನಾಥರಾವ್ ಕುಲಕರ್ಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಲಕಿ ಸಾವು: ಗುರುತು ಪತ್ತೆಗೆ ಮನವಿ

ಗುಲ್ಬರ್ಗ: ಇಲ್ಲಿನ ರೈಲು ನಿಲ್ದಾಣದ ವಿಐಪಿ ಗೇಟ್ ಎದುರು ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಬಾಲಕಿ (15)ಯನ್ನು 4ರಂದು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ, ಚಿಕಿತ್ಸೆ ಫಲಕಾರಿಯಾಗದೆ 5ರಂದು ಗುರುವಾರ ಮೃತಪಟ್ಟಿದ್ದಾಳೆ ಎಂದು ವಾಡಿ ರೈಲು ನಿಲ್ದಾಣ ಠಾಣೆ ಪೊಲೀಸರು ತಿಳಿಸಿದ್ದಾರೆ.ರಕ್ತ ಸಂಬಂಧಿಕರು ಇದ್ದಲ್ಲಿ ಗುರುತಿಸುವಂತೆ ಕೋರಿದ್ದಾರೆ. ಮೃತಳು ತೆಳ್ಳನೆಯ ಶರೀರ ಹೊಂದಿದ್ದು, ಕೋಲುಮುಖ, ಸಾದಾ ಕಪ್ಪು ವರ್ಣ ಹಾಗೂ ದಪ್ಪನೆಯ ಹಲ್ಲು ಹೊಂದಿದ್ದಾಳೆ ಎಂದು ತಿಳಿಸಲಾಗಿದೆ. ಮೈಮೇಲೆ ಕೆಂಪು ಬಣ್ಣ, ಹಳದಿ ವರ್ಣದ ಪೈಜಾಮ ಇದೆ. ಸಂಪರ್ಕ ಸಂಖ್ಯೆ: 08476 202244, 94498 08716ಪಿಯು: ಕನ್ನಡದಲ್ಲೇ ಐದು ಡಿಬಾರ್!

ಗುಲ್ಬರ್ಗ: ಪಿಯು ಪೂರಕ ಪರೀಕ್ಷೆ ನಡೆಯುತ್ತಿದ್ದು ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು ಐದು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಆಳಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಂ. ಸಾಳುಂಕೆ ತಂಡವು ಮೂವರನ್ನು, ಗುಲ್ಬರ್ಗದ ಎಂಎಸ್‌ಐ ಕಾಲೇಜಿನಲ್ಲಿ ಇಲಾಖೆ ಸಹಾಯಕ ನಿರ್ದೇಶಕ ಎ.ಎಚ್.ಎಲಿಮನಿ ನೇತೃತ್ವದ ತಂಡವು ಒಬ್ಬ ಮತ್ತು ಅಫಜಲಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಲಾಖೆ ಮುಖ್ಯ ಅಧೀಕ್ಷಕ ಎಚ್.ಸಿ.ಪಾಟೀಲ್ ತಂಡವು ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದೆ.ಜಿಲ್ಲೆಯ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪ್ರಥಮ ಭಾಷಾ ಕನ್ನಡ ಶುಕ್ರವಾರ ಪರೀಕ್ಷೆ ಇತ್ತು. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಈ ತನಕ ಅತಿ ಹೆಚ್ಚು ಮಂದಿ ಕನ್ನಡ ವಿಷಯದಲ್ಲೇ ಡಿಬಾರ್ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry