ಮಂಗಳವಾರ, ಜನವರಿ 21, 2020
29 °C

ಜೇವರ್ಗಿ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಮ್ಮ ರಾಜಕೀಯ ಭವಿಷ್ಯ ರೂಪಿಸಿದ ಜೇವರ್ಗಿ ತಾಲ್ಲೂಕಿನ ಜನರು ತಮ್ಮ ಕಾರ್ಯ ಚಟುವಟಿಕೆಗಳಿಗಾಗಿ  ಅಸ್ತಿತ್ವಕ್ಕೆ ತಂದಿರುವ ಗುಲ್ಬರ್ಗ ನಿವಾಸಿಗಳ ಜೇವರ್ಗಿ ತಾಲ್ಲೂಕಿನ ಕ್ಷೇಮಾಭಿವೃದ್ದಿ ಸಂಘ ಮತ್ತು ಅದರ ಅಡಿಯಲ್ಲಿ ನಡೆಯುವ ಸಹಕಾರಿ ಬ್ಯಾಂಕ್‌ಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್. ಧರ್ಮಸಿಂಗ್ ಹೇಳಿದರು.ಜೇವರ್ಗಿ ತಾಲ್ಲೂಕಿನ ಗುಲ್ಬರ್ಗ ನಿವಾಸಿಗಳ ಕ್ಷೇಮಾಭಿವದ್ಧಿ ಸಂಘದ ಅಡಿಯಲ್ಲಿ ನೂತನವಾಗಿ ಆರಂಭಿಸಿರುವ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಗುರುವಾರ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಂಘ ಸ್ಥಾಪಿಸಲು ಉದ್ದೇಶಿಸಿರುವ ವಸತಿ ನಿಲಯ, ಭವನ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ತಾಲ್ಲೂಕಿನವರೆಲ್ಲರೂ ಸೇರಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ್ದು, ಜೇವರ್ಗಿಯ ಹಿರಿಮೆಗೆ ಸಾಕ್ಷಿಯಾಗಿದೆ.ಸಂಘಟಿತರಾಗಿ ಕೆಲಸ ಮಾಡಿದಾಲೇ ಯೋಜನೆಗಳು ಸಾಕಾರಗೊಳ್ಳುತ್ತವೆ ಎಂದರು.ಶಾಸಕ ದೊಡ್ಡಪ್ಪಗೌಡ ಪಾಟೀಲ ಮಾತನಾಡಿ, ಜೇವರ್ಗಿ ತಾಲ್ಲೂಕು ಗುಲ್ಬರ್ಗ ನಿವಾಸಿಗಳ ಕ್ಷೇಮಾಭಿವದ್ಧಿ ಸಂಘಕ್ಕೆ ಜಿಡಿಎದಿಂದ  ನಿವೇಶನ ಕೊಡಿಸುವುದಾಗಿ ಹೇಳಿದರು.

ವಿಧಾನ ಪರಿಷತ ಸದಸ್ಯ ಅಲಮ್ಲಪ್ರಭು ಪಾಟೀಲ ತಮ್ಮ ಅನುದಾನದಿಂದ ರೂ. 5 ಲಕ್ಷ  ನೀಡುವುದಾಗಿ ಪ್ರಕಟಿಸಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ,  ಡಿಸಿಸಿ ಬ್ಯಾಂಕ್ ಎಂಡಿ ಶರಣಬಸಪ್ಪ ಬೆಣ್ಣೂರ ಮಾತನಾಡಿದರು

. ಸೊನ್ನ ವಿರಕ್ತಮಠದ  ಪೂಜ್ಯ ಶಿವಾನಂದ ಮಹಾಸ್ವಾಮಿಗಳು  ಸನ್ನಿಧಾನ ವಹಿಸಿ ಆಶೀರ್ವಚನ ನೀಡಿದರು.  ಸೌಹಾರ್ದ ಅಧ್ಯಕ್ಷ ಮಲಿಕ್ಲಾರ್ಜುನ ಪಾಟೀಲ ಕೆಲೂರ‌್ಲ ಅಧ್ಯಕ್ಷತೆ ವಹಿಸಿದ್ದರು. ಸಂಘದ  ಅಧ್ಯಕ್ಷ ವಿಜಯಕುಮಾರ ದುದ್ದಗಿ ಮಳ್ಳಿ ವೇದಿಕೆಯಲ್ಲಿದ್ದರು.ಪ್ರಭುಗೌಡ ಪಾಟೀಲ ಗಂವ್ಹಾರ  ಪ್ರಾಸ್ತಾವಿಕ ಮಾತನಾಡಿದರು. ಹುಲಿಕಂಠರಾಯ ಎಸ್.ಎಂ.ಅರಳಗುಂಡಗಿ ಸ್ವಾಗತಿಸಿದರು. ಶಾಂತಗೌಡ ಪಾಟೀಲ ನಿರೂಪಿಸಿದರು. ನಿವತ್ತ ನೌಕರರಿಗೆ ಹಾಗೂ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)