ಶುಕ್ರವಾರ, ಜೂನ್ 18, 2021
28 °C

ಜೈನರ ಶ್ರದ್ಧಾ ಕೇಂದ್ರ: ಛಾಯಾ ಚಂದ್ರನಾಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಗುಂದ: ಇಲ್ಲಿಗೆ ಸಮೀಪದ ಚಿಂಚಲಿ ಗ್ರಾಮದ ಗುಡ್ಡದಲ್ಲಿರುವ ಜೈನರ ಶ್ರದ್ಧಾ ಕೇಂದ್ರವಾದ ಛಾಯಾ ಚಂದ್ರನಾಥ ಶಿಲೆಯ ಮೇಲೆ ಇದೇ 23ರ ಯುಗಾದಿಯಂದು ತೀರ್ಥಂಕರ ಬಿಂಬ ಕಾಣಲಿದ್ದು, ಇದನ್ನು ವೀಕ್ಷಿಸಲು ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.ಗುಡ್ಡದ ಮೇಲಿರುವ ಜೈನ ಬಸದಿಯ ಮಂಟಪದ ಪಶ್ಚಿಮಕ್ಕಿರುವ ಚಿಂಚಲಿ ಗುಡ್ಡದಲ್ಲಿ ಪೂರ್ವಾಭಿಮುಖವಾಗಿರುವ ಒಡೆದ ಎರಡು ಶಿಲೆಗಳನ್ನು ~ಛಾಯಾ ಚಂದ್ರನಾಥ~ ಎಂದು ಕರೆಯಲಾಗುತ್ತಿದ್ದು ಜೈನರ ಶ್ರದ್ಧಾಕೇಂದ್ರವಾಗಿದೆ.ನಿತ್ಯ ಪ್ರಥಮ ಸೂರ್ಯಕಿರಣಗಳು ಶಿಲೆಯ ಮೇಲೆ ಪಸರಿಸಿದಾಗ ತೀರ್ಥಂಕರ ರೂಪದ ಗುಲಾಬಿ ಬಣ್ಣದ ಆಕೃತಿ ಗೋಚರಿಸುವ ಪ್ರತೀತಿ ಮುನಿಗಳ ಕಾಲದಿಂದಲೂ ಪ್ರಚಲಿತವಿದ್ದು, ಆ ನಂಬಿಕೆ ಇಂದಿಗೂ ಜೈನ ಸಮುದಾಯದಲ್ಲಿ ನೆಲೆಯೂರಿದೆ.ಶಿಲೆಯ ಮೇಲೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಗೋಚರಿಸುವ ತೀರ್ಥಕರರ ಬಿಂಬವು ಯುಗಾದಿ ಶುದ್ಧ ಪಾಡ್ಯದಂದು ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತಿದ್ದು ಮುನಿಪುರದ (ಮುಳಗುಂದ) ಮುನಿಗಳು ಜೈನ ಬಸದಿಯಲ್ಲಿಯೇ ಕುಳಿತು ವೀಕ್ಷಿಸುತ್ತಿದ್ದರು.ಈ ನಂಬಿಕೆಯಿಂದಲೇ ಇಂದಿಗೂ ಅನೇಕ ಜೈನ ಯತಿಗಳು, ವಿದ್ವಾಂಸರು, ಸಾಹಿತಿಗಳು, ಸಾವಿರಾರು ಶ್ರದ್ಧಾಳುಗಳು ಯುಗಾದಿಯ ಶುದ್ಧ ಪಾಡ್ಯದಂದು ಆ ಸ್ಥಳದಲ್ಲಿ ಬಂದು ಸೇರುತ್ತಾರೆ.ಪ್ರತಿವರ್ಷವು ಯುಗಾದಿಯ ಮುನ್ನಾ ದಿನವೇ ಗ್ರಾಮಕ್ಕೆ ಆಗಮಿಸಿ ಶಾಲೆಯೊಂದರಲ್ಲಿ ನೆಲೆ ನಿಂತು  ಬೆಳಗಿನ ಸೂರ್ಯನ ಪ್ರಥಮ ಕಿರಣಗಳು ಬೀಳುವ ಮೊದಲೇ ತೀರ್ಥಂಕರ ಬಿಂಬ ವೀಕ್ಷಿಸಲು ಬರುತ್ತಾರೆ. ಜೈನ ಸಮುದಾಯದ ಜತೆಗೆ ಗ್ರಾಮದ ಜನತೆ ಕೂಡ ಇದನ್ನು ವೀಕ್ಷಿಸಲು ಇಲ್ಲಿ ಸೇರುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.