ಮಂಗಳವಾರ, ಡಿಸೆಂಬರ್ 10, 2019
26 °C

ಜೈನ್‌, ಮೌಂಟ್ಸ್‌ ಅರ್ಹತೆ

Published:
Updated:
ಜೈನ್‌, ಮೌಂಟ್ಸ್‌ ಅರ್ಹತೆ

ಬೆಂಗಳೂರು: ಜೈನ್‌ ಯುನಿವರ್ಸಿಟಿ ತಂಡದವರು ನ್ಯಾಷನಲ್‌ ಬ್ಯಾಸ್ಕೆಟ್‌­ಬಾಲ್‌ ಸಂಸ್ಥೆ ವತಿಯಿಂದ ನಡೆದ ‘ಎನ್‌ಬಿಎ ಜಾಮ್‌’ ಚಾಂಪಿಯನ್‌ಷಿಪ್‌­ನಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್‌ಗೆ ಅರ್ಹತೆ ಪಡೆದುಕೊಂಡರು.ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಜೈನ್ ತಂಡ ಅಮೋಘ ಪ್ರದರ್ಶನ ನೀಡಿತು. ಈ ತಂಡ 21–15 ಪಾಯಿಂಟ್‌ಗಳಿಂದ ಕ್ರೈಸ್ಟ್‌ ಫ್ಲೇಮ್ಸ್‌ ಎದುರು ಗೆಲುವು ಸಾಧಿಸಿತು. ಈ ಮೂಲಕ ಸೆಪ್ಟೆಂಬರ್‌ 29ರಂದು ಮುಂಬೈಯಲ್ಲಿ ನಡೆಯಲಿರುವ  ಫೈನಲ್‌ನಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಂಡಿತು.ಈ ಚಾಂಪಿಯನ್‌ಷಿಪ್‌ನಲ್ಲಿ ಹೈದರಾಬಾದ್‌, ಬೆಂಗಳೂರು, ದೆಹಲಿ ಮತ್ತು ಮುಂಬೈ ಲೆಗ್‌ಗಳಲ್ಲಿ ಗೆಲುವು ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಬಲಿಷ್ಠ ತಂಡಗಳು ಪ್ರಶಸ್ತಿ ಘಟ್ಟದಲ್ಲಿ ಒಂದೆಡೆ ಸೇರಲಿರುವ ಕಾರಣ ಪ್ರಬಲ ಪೈಪೋಟಿ ಕಂಡು ಬರಲಿದೆ. ಇದರಲ್ಲಿ 500ಕ್ಕೂ ಅಧಿಕ ತಂಡಗಳು ಹೋರಾಟ ನಡೆಸಲಿವೆ.‘ಈ ಟೂರ್ನಿ ಹೊಸ ಅನುಭವ ನೀಡಿದೆ. ಇಲ್ಲಿ ಆಡಿದ್ದರಿಂದ ಖುಷಿ­ಯಾಗಿದೆ. ಎನ್‌ಬಿಎ ಖ್ಯಾತನಾಮರನ್ನು ಮುಖಾಮುಖಿಯಾಗಬೇಕೆನ್ನುವ ನನ್ನ ಕನಸಿಗೆ ಈ ಟೂರ್ನಿ ನೆರವಾಗಲಿದೆ’ ಎಂದು ಜೈನ್‌ ತಂಡದ ಆಟಗಾರ­ರೊಬ್ಬರು ಸಂತೋಷ ವ್ಯಕ್ತಪಡಿಸಿದರು.ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ ಕ್ರೈಸ್ಟ್‌ ಎಕ್ಸ್‌ವೈಝಡ್‌ ತಂಡ  6–3ರಲ್ಲಿ ವಿವೇಕ್ಸ್‌ ಕ್ಲಬ್‌ ಮೇಲೆ ಗೆಲುವು ಸಾಧಿಸಿದರೆ, ಜೂನಿಯರ್‌ ಬಾಲಕರ ವಿಭಾಗದಲ್ಲಿ ಸುರಾನ ತಂಡ ಪ್ರಾಬಲ್ಯ ಮೆರೆಯಿತು. ಫೈನಲ್ ಹೋರಾಟದಲ್ಲಿ ಸುರಾನ 18–14 ಪಾಯಿಂಟ್‌ಗಳಿಂದ ಕ್ರೈಸ್ಟ್‌ ಕಾಲೇಜು ಎದುರು ಗೆಲುವಿನ ನಗೆ ಬೀರಿತು.ಮಹಿಳಾ ವಿಭಾಗದಲ್ಲಿ ಮೌಂಟ್ಸ್‌ ‘ಎ’ ತಂಡ 16–8 ಪಾಯಿಂಟ್‌ಗಳಿಂದ ಜೈನ್‌ ‘ಎ’ ತಂಡವನ್ನು ಸೋಲಿಸಿತು. 16–18, 19ರಿಂದ 23 ವರ್ಷ ಹೀಗೆ ವಿವಿಧ ವಯೋಮಾನದಲ್ಲಿ ಸ್ಪರ್ಧೆಗಳು ನಡೆದವು. 100 ತಂಡಗಳ 450ಕ್ಕೂಆಟಗಾರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)